ಶಿಮ್ಲಾದಲ್ಲಿ ಕಂಪಿಸಿದ ಭೂಮಿ

ಈ ಸುದ್ದಿಯನ್ನು ಶೇರ್ ಮಾಡಿ

Earthquake--01
ಶಿಮ್ಲಾ, ಜೂ.17- ಚೀನಾದ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಶಿಮ್ಲಾದಲ್ಲಿ ಇಂದು ಲಘು ಭೂಕಂಪನ ಸಂಭವಿಸಿದೆ. ಶಿಮ್ಲಾದ ಕಿನ್ನೂರ್ ಜಿಲ್ಲೆಯಲ್ಲಿ ಭೂಕಂಪನ ಉಂಟಾಗಿದ್ದು ಯಾವುದೇ ಸಾವು , ನೋವು ಹಾಗೂ ನಷ್ಟ ಸಂಭವಿಸಿಲ್ಲ. ಬೆಳಗಿನ ಜಾವ 3.36ರಲ್ಲಿ ಸಂಭವಿಸಿದ ಭೂಕಂಪನದ ತೀವ್ರತೆ 3.2ರಷ್ಟಿತ್ತು ಎಂದು ಭೂಗರ್ಭ ಇಲಾಖೆ ವರದಿ ನೀಡಿದೆ.  ನಿದ್ರೆ ಮಂಪರಿನಲ್ಲಿ ಜನರು ಭೂಕಂಪನದ ಅನುಭವದಿಂದ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.  ಜೂನ್ 14 ರಂದು ಜಮ್ಮು ಕಾಶ್ಮೀರದ ಚಾಂಬಾ ಜಿಲ್ಲೆಯಲ್ಲೂ ಕೂಡ ಲಘು ಭೂಕಂಪನವಾಗಿದ್ದು, ಅದರ ತೀವ್ರತೆ 4.6 ರಷ್ಟಿತ್ತು. ಗಡಿ ಭಾಗದಲ್ಲಿ ಪದೇ ಪದೇ ಭೂಕಂಪನ ಸಂಭವಿಸುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ.

Facebook Comments

Sri Raghav

Admin