ನಾನೇ ವಿಶ್ವದ ಸರ್ವಶ್ರೇಷ್ಠ ಫುಟ್ಬಾಲ್ ಆಟಗಾರ : ನೈಮರ್

ಈ ಸುದ್ದಿಯನ್ನು ಶೇರ್ ಮಾಡಿ

Mymer--v01

ಮಾಸ್ಕೋ, ಜೂ.17-ನಾನೇ ವಿಶ್ವದ ಸರ್ವಶ್ರೇಷ್ಠ ಪುಟ್ಬಾಲ್ ಆಟಗಾರ ಎಂದು ಹೇಳಿಕೊಳ್ಳುವ ಮೂಲಕ ಬ್ರೆಜಿಲ್ ತಂಡದ ದೈತ್ಯ ಪ್ರತಿಭೈ ನೈಮರ್ ಮತ್ತೆ ಸುದ್ದಿಯಲ್ಲಿದ್ದಾರೆ. 21ನೇ ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಗೆಲ್ಲುವ ಐದು ನೆಚ್ಚಿನ ತಂಡಗಳಲ್ಲಿ ಒಂದಾಗಿರುವ ಬ್ರೆಜಿಲ್ ರಾಷ್ಟ್ರೀಯ ತಂಡದ ಮುಂಚೂಣಿ ಆಟಗಾರ ನೈಮರ್ ನಾನೇ ಜಗತ್ತಿನ ಅತ್ಯುತ್ತಮ ಆಟಗಾರ ಎಂದು ತಮ್ಮನ್ನು ತಾವು ಹೊಗಳಿಕೊಂಡಿದ್ದರೂ, ಅರ್ಜೇಂಟಿನಾದ ಲಿಯೋನಲ್ ಮೆಸ್ಸಿ ಹಾಗೂ ಪೋರ್ಚುಗಲ್‍ನ ಕ್ರಿಸ್ಟಿಯಾನೋ ರೊನಾಲ್ಡೋ ಅವರನ್ನೂ ಹಾಡಿ ಹೊಗಳಿದ್ದಾರೆ.

ಅವರಿಬ್ಬರೂ ಅನ್ಯಗ್ರಹದಿಂದ ಬಂದಂಥ ಅದ್ಭುತ ಶಕ್ತಿ ಉಳ್ಳವರು. ಇತರ ಆಟಗಾರರಿಗಿಂತ ಶ್ರೇಷ್ಠ ಸ್ಥಾನದಲ್ಲಿದ್ದಾರೆ ಎಂದು ನೈಮರ್ ಬಣ್ಣಿಸಿದ್ದಾರೆ. ನಾನು ಈ ಬಾರಿ ವಿಶ್ವಕಪ್‍ನಲ್ಲಿ ನನ್ನ ತಂಡವನ್ನು ಗೆಲ್ಲಿಸಬೇಕಿದೆ. ನನ್ನ ಮೇಲೆ ದೊಡ್ಡ ಹೊಣೆ ಇದೆ. ಬಹುಕಾಲದ ಕನಸನ್ನು ನನಸು ಮಾಡಬೇಕೆಂಬುದು ನನ್ನ ಮಹತ್ವಾಕಾಂಕ್ಷೆ ಎಂದು ಅವರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.

26 ವರ್ಷದ ನೈಮರ್ ಈ ಬಾರಿಯ ವಿಶ್ವಕಪ್‍ನ ಜನಪ್ರಿಯ ತಾರೆಯರಲ್ಲಿ ಒಬ್ಬರಾಗಿದ್ದು, ಟೂರ್ನಿಯ ಗೋಲ್ಡನ್ ಬೂಟ್ ಪೈಪೋಟಿಯಲ್ಲಿದ್ದಾರೆ. ಇಂದು ರಾತ್ರಿ ಬ್ರೆಜಿಲ್ ಮತ್ತು ಸ್ವಿಟ್ಜರ್‍ಲೆಂಡ್ ತಂಡಗಳ ನಡುವೆ ರೋಚಕ ಹಣಾಹಣಿ ನಡೆಯಲಿದ್ದು, ಎಲ್ಲರ ಕಣ್ಣು ನೈಮರ್‍ನತ್ತ ನೆಟ್ಟಿದೆ. ಈ ಎರಡೂ ತಂಡಗಳು ಒಟ್ಟು ಎಂಟು ಬಾರಿ ಮುಖಾಮುಖಿಯಾಗಿದ್ದು, ಬ್ರೆಜಿಲ್ 3 ಹಾಗೂ ಸ್ವಿಟ್ಜರ್‍ಲೆಂಡ್ 2 ಪಂದ್ಯಗಳಲ್ಲಿ ಜಯಸಾಧಿಸಿದೆ.

Facebook Comments

Sri Raghav

Admin