ರೈಲುಗಳಲ್ಲೂ ವಿಮಾನ ಮಾದರಿಯ ಹೈಟೆಕ್ ಶೌಚಾಲಯ..!

ಈ ಸುದ್ದಿಯನ್ನು ಶೇರ್ ಮಾಡಿ

Toilet--01

ನವದೆಹಲಿ, ಜೂ.17- ರೈಲು ಭೋಗಿಗಳಲ್ಲಿ ಜೈವಿಕ ಶೌಚಾಲಯಗಳನ್ನು ಸ್ಥಾಪಿಸಿದ ನಂತರ ಭಾರತೀಯ ರೈಲ್ವೆ ಇದೀಗ ವಿಮಾನಗಳಲ್ಲಿರುವಂತೆ ಮೇಲ್ದರ್ಜೆಗೇರಿಸಿದ ನಿರ್ವಾತ ಜೈವಿಕ ಶೌಚಾಲಯ ( ವ್ಯಾಕ್ಯೂಂ ಬಯೋ ಟಾಲೈಟ್) ಸ್ಥಾಪನೆಗೆ ಚಿಂತನೆ ನಡೆಸಿದೆ. ವಿಮಾನಗಳಲ್ಲಿರುವಂತೆ ಅತ್ಯಾಧುನಿಕ ಶೌಚಾಲಯಗಳನ್ನು ಭಾರತೀಯ ರೈಲ್ವೆಗಳಲ್ಲಿ ಅಳವಡಿಸುವ ಯೋಜನೆ ಕೇಂದ್ರ ಸರ್ಕಾರದ ಮುಂದಿದೆ ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ವಾರ್ತಾ ಸಂಸ್ಥೆಯೊಂದಕ್ಕೆ ನೀಡಿದ ಸಂದರ್ಭದಲ್ಲಿ ಹೇಳಿದ್ದಾರೆ.

ವಿಮಾನಗಳಲ್ಲಿರುವ ನಿರ್ವಾತ ಜೈವಿಕ ಶೌಚಾಲಯಗಳ ಪ್ರಯೋಗವನ್ನು ಈಗಾಗಲೇ ನಾವು ಆರಂಭಿಸಿದ್ದೇವೆ. ಇಂಥ 500 ಟಾಯ್ಲೆಟ್‍ಗಳಿಗೆ ಆದೇಶ ನೀಡಿದ್ದೇವೆ. ಈ ಪ್ರಯೋಗ ಯಶಸ್ವಿಯಾದರೆ ಭಾರತದ ರೈಲುಗಳಲ್ಲಿ ಇವುಗಳನ್ನು ಅನುಷ್ಠಾನಗೊಳಿಸುತ್ತೇವೆ ಎಂದು ತಿಳಿಸಿದ್ದಾರೆ. ಈ ವರ್ಷ ಮೇ 31ರವರೆಗೆ ಪ್ರತಿ ಶೌಚಾಲಯಕ್ಕೆ ಒಂದು ಲಕ್ಷ ರೂ. ವೆಚ್ಚೆದಲ್ಲಿ 37,411 ಭೋಗಿಗಳಿಗೆ 1,36,965 ಜೈವಿಕ ಶೌಚಾಲಯಗಳನ್ನು ಅಳವಡಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

Facebook Comments

Sri Raghav

Admin