ಪೂರ್ಣ ಬಜೆಟ್ ಬೇಡ ಎಂದ ಸಿದ್ದರಾಮಯ್ಯರ ವಿರುದ್ಧ ಕಾಂಗ್ರೆಸ್‍ಲ್ಲೇ ತೀವ್ರ ಅಸಮಾಧಾನ

ಈ ಸುದ್ದಿಯನ್ನು ಶೇರ್ ಮಾಡಿ

Siddaramaiah--01

ಬೆಂಗಳೂರು, ಜೂ.17-ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪೂರ್ಣ ಬಜೆಟ್ ಮಂಡಿಸುವ ಅಗತ್ಯವಿಲ್ಲ. ಪೂರಕ ಬಜೆಟ್ ಮಂಡಿಸಿದರೆ ಸಾಕು ಎಂದು ಮಾಜಿ ಮುಖ್ಯಮಂತ್ರಿ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ನೀಡಿರುವ ಹೇಳಿಕೆಗೆ ಕಾಂಗ್ರೆಸ್‍ಪಕ್ಷದಲ್ಲೇ ತೀವ್ರ ಅಸಮಾಧಾನ ವ್ಯಕ್ತವಾಗಿದೆ.  ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಭಿನ್ನಮತ ಬಂಡಾಯ ಶಮನಗೊಂಡು ಸರ್ಕಾರ ಟೇಕಾಫ್ ಆದ ಸಂದರ್ಭದಲ್ಲೇ ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯನವರು ಈ ರೀತಿ ಬಹಿರಂಗ ಹೇಳಿಕೆ ನೀಡಿ ಮುಜುಗರ ಉಂಟು ಮಾಡಿದ್ದಾರೆ ಎಂದು ಸರ್ಕಾರದಲ್ಲಿರುವ ಅನೇಕ ಮುಖಂಡರು ಹಾಗೂ ಪಕ್ಷದ ಹಲವು ಹಿರಿಯ ನಾಯಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಯಾವುದೇ ಒಂದು ಸರ್ಕಾರ ಅಧಿಕಾರಕ್ಕೆ ಬಂದಾಗ ತಮ್ಮ ದೂರದೃಷ್ಟಿಯ ಯೋಜನೆಗಳನ್ನು ಜನರ ಮುಂದಿಡಲು ಬಜೆಟ್ ಒಂದು ವೇದಿಕೆಯಾಗಿರುತ್ತದೆ. ಅದನ್ನು ಮಂಡಿಸಲು ಸರ್ಕಾರದ ಮುಖ್ಯಸ್ಥರಿಗೆ ಅವಕಾಶವಿರುತ್ತದೆ. ಮೈತ್ರಿ ಸರ್ಕಾರವಾದಾಗ ಮೈತ್ರಿ ಸರ್ಕಾರದ ಮುಖಂಡರು ಅದಕ್ಕೆ ಅವಕಾಶ ನೀಡಬೇಕೇ ಹೊರತು ಅಡಚಣೆ ಮಾಡಬಾರದು. ಆದರೆ ಸಾಕಷ್ಟು ಅನುಭವವಿರುವ ಸಿದ್ದರಾಮಯ್ಯನವರು ಏಕೆ ಈ ರೀತಿ ಹೇಳಿದ್ದಾರೆ ಎಂದು ಹಲವರು ಆಕ್ಷೇಪವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಪೂರ್ಣ ಬಜೆಟ್ ಮಂಡಿಸುತ್ತೇನೆ ಎಂದು ಹಠ ಹಿಡಿದಿದ್ದಾರೆ. ಸಿದ್ದರಾಮಯ್ಯನವರು ಪೂರಕ ಬಜೆಟ್ ಮಂಡಿಸಿದರೆ ಸಾಕು ಎಂದು ಹೇಳಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ಪೂರ್ಣ ಬಜೆಟ್ ಮಂಡಿಸಿದರೆ ಸಿದ್ದರಾಮಯ್ಯನವರ ಹೇಳಿಕೆಗೆ ಬೆಲೆ ಇಲ್ಲದಂತಾಗುತ್ತದೆ. ಆಗ ಮತ್ತೆ ಬಣ ರಾಜಕೀಯ ಶುರುವಾಗುತ್ತದೆ. ಸಂಪುಟ ರಚನೆ, ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಉಂಟಾದ ಎಲ್ಲಾ ಬಂಡಾಯ, ಭಿನ್ನಮತ ತಣ್ಣಗಾಗಿದೆ ಎಂಬ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ನೀಡಿರುವ ಹೇಳಿಕೆ ರಾಜಕೀಯ ರಾಡಿಯನ್ನು ಉಂಟುಮಾಡಿದೆ.

Facebook Comments

Sri Raghav

Admin