ಆಟಿಕೆ ಎಂದು ಭಾವಿಸಿ ಮಗು ಹಾರಿಸಿದ ಪಿಸ್ತೂಲ್ ಗುಂಡಿಗೆ ತಾಯಿ ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

Gun--01

ಕೋಲ್ಕತ್ತಾ, ಜೂ.18- ಆಟದ ಪಿಸ್ತೂಲ್ ಎಂದು ತಿಳಿದು ಮಗಳಿಗೆ ಆಟವಾಡಲು ಕೊಟ್ಟಿದ್ದ ತಾಯಿ ಜೀವ ಕಳೆದುಕೊಂಡಿರುವ ಘಟನೆ ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ನಡೆದಿದೆ. ಹೂಗ್ಲಿ ಜಿಲ್ಲೆಯ ಅರಾಮ್‍ಬಾಗ್‍ನ ಕಾಕೊಲಿ ಜಾನಾ ಎಂಬುವವರೇ ಮೃತಪಟ್ಟ ತಾಯಿ.

ಘಟನೆ ವಿವರ:

ಕಾಕೊಲಿ ಜಾನಾ ಅವರು ತಮ್ಮ ಮನೆಯ ಮುಂದಿದ್ದ ಕೈತೋಟದಲ್ಲಿ ಬಿದ್ದಿದ್ದ ಪಿಸ್ತೂಲ್ ಅನ್ನು ಆಟದ ಪಿಸ್ತೂಲು ಎಂದು ತಿಳಿದು ತಮ್ಮ ಮಗಳಿಗೆ ಆಡಲು ಕೊಟ್ಟಿದ್ದರು. ಮಗು ಆಟವಾಡುತ್ತಿದ್ದಾಗ ಪಿಸ್ತೂಲ್‍ನಿಂದ ಸಿಡಿದ ಗುಂಡು ಕಾಕೊಲಿ ಜಾನಾರ ಬೆನ್ನಿಗೆ ತಗುಲಿದ್ದರಿಂದ ಆಕೆ ತೀವ್ರವಾಗಿ ಗಾಯಗೊಂಡಿದ್ದರು.   ಚಿಕಿತ್ಸೆಗೆಂದು ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿದರೂ ಕೂಡ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾಳೆ.

ಅರಾಮ್‍ಬಾಗ್ ಠಾಣೆ ಪೊಲೀಸರು ಕಾಕೊಲಿಯ ಮಗಳನ್ನು ವಿಚಾರಿಸಿದಾಗ, ತಾಯಿ ನನಗೆ ತೋಟದಲ್ಲಿ ಸಿಕ್ಕಿದ ಪಿಸ್ತೂಲ್ ಅನ್ನು ಅಟಿಕೆ ಎಂದು ತಿಳಿದು ನನಗೆ ಆಟವಾಡಲು ನೀಡಿದ್ದರು, ನಾನು ಆಟವಾಡುತ್ತಿದ್ದಾಗ ಅದರಿಂದ ಹೊರ ಬಂದ ಗುಂಡಿನಿಂದ ತಾಯಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿ ರುವ ಅರಾಮ್‍ಬಾಗ್ ಠಾಣೆ ಪೊಲೀಸರು ಆ ಪಿಸ್ತೂಲಿನ ಅಸಲಿ ಮಾಲೀಕರ ಶೋಧದಲ್ಲಿ ತೊಡಗಿದ್ದಾರೆ.

Facebook Comments

Sri Raghav

Admin