ಕುಮಾರಸ್ವಾಮಿ ಬಜೆಟ್ ಮಂಡನೆಗೆ ಅಡ್ಡಿಪಡಿಸುವ ಅಗತ್ಯವಿಲ್ಲ : ಇಬ್ರಾಹಿಂ

ಈ ಸುದ್ದಿಯನ್ನು ಶೇರ್ ಮಾಡಿ

Ibrahim--01
ಬೆಂಗಳೂರು, ಜೂ.18- ಹೊಸ ದಾಗಿ ಸಿಎಂ ಆಗಿರುವ ಕುಮಾರ ಸ್ವಾಮಿ ಅವರಿಗೆ ಹುಮ್ಮಸ್ಸಿದೆ. ಬಜೆಟ್ ಮಂಡಿಸಲು ಮುಂದಾಗಿದ್ದಾರೆ. ಅದಕ್ಕೆ ಅಡ್ಡಿಪಡಿಸುವ ಅಗತ್ಯವಿಲ್ಲ ಎಂದು ವಿಧಾನಪರಿಷತ್ ಸದಸ್ಯ, ಹಿರಿಯ ಕಾಂಗ್ರೆಸಿಗ ಸಿ.ಎಂ.ಇಬ್ರಾಹಿಂ ಅಭಿಪ್ರಾಯಪಟ್ಟರು. ವಿಧಾನಸೌಧದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಮದುವೆಯಾಗಿದೆ. ಮುಹೂರ್ತ ಫಿಕ್ಸ್ ಆಗಿದೆ. ಹೊಸ ಮುಖ್ಯ ಮಂತ್ರಿಯ ಉತ್ಸಾಹಕ್ಕೆ ಯಾಕೆ ತಣ್ಣೀರು ಎರಚಬೇಕು ಎಂದು ಮಾರ್ಮಿಕವಾಗಿ ಹೇಳಿದರು. ಬಜೆಟ್ ಮಂಡನೆ ವಿಷಯವಾಗಿ ಯಾವುದೇ ಗೊಂದಲಗಳು ಇಲ್ಲ. ಡಿಸಿಎಂ ಪರಮೇಶ್ವರ್ ಇದ್ದಾರೆ.ಅದನ್ನೆಲ್ಲ ನೋಡಿಕೊಳ್ಳುತ್ತಾರೆ ಎಂದರು.

ವಿಧಾನಪರಿಷತ್‍ನಲ್ಲಿ ಜಯ ಮಾಲ್ ಅವರನ್ನು ಶಾಸಕಾಂಗ ಪಕ್ಷದ ನಾಯಕನ್ನಾಗಿ ಮಾಡಿರುವುದಕ್ಕೆ ನನ್ನ ವಿರೋಧ ವಿಲ್ಲ. ಆಕೆ ಹೆಣ್ಣು ಮಗಳು. ಹಿಂದುಳಿದ ವರ್ಗಕ್ಕೆ ಸೇರಿದವರು. ನಾನು ಎಂಟು ಹೆಣ್ಣು ಮಕ್ಕಳ ತಂದೆ ಅವರಿಗೆ ನಾನ್ಯಾಕೆ ವಿರೋಧ ಮಾಡ ಲಿ ಎಂದು ಮರು ಪ್ರಶ್ನೆ ಹಾಕಿದರು.

ಶ್ರೀರಾಮಸೇನೆಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರ ಟೀಕೆಗೆ ಪ್ರತಿಕ್ರಿಯೆ ನೀಡಿದ ಇಬ್ರಾಹಿಂ, ನನಗೆ ಐಎಸ್‍ಐಯೂ ಗೊತ್ತಿಲ್ಲ, ಸಂಘ ಪರಿವಾರದ ಧರ್ಮಾಧರಿತ ಸಂಘರ್ಷಗಳು ಗೊತ್ತಿಲ್ಲ. ಹಿಂದು ಅಥವಾ ಮುಸ್ಲಿಂ ಯಾವುದೇ ರೀತಿಯ ಭಯೋತ್ಪಾದನೆಯಾದರೂ ಆಯಾ ಸಮುದಾಯಗಳೇ ಅದನ್ನು ನಿಯಂ ತ್ರಿಸಬೇಕು. ಇಲ್ಲವಾದರೆ ಭವಿಷ್ಯದಲ್ಲಿ ದೇಶಕ್ಕೆ ಗಂಡಾಂತರ ಕಾದಿದೆ ಎಂದು ಆತಂಕ ವ್ಯಕ್ತಪಡಿಸಿದರು. ಗೌರಿ ಲಂಕೇಶ್ ಹತ್ಯೆ ಮಾಡಿದ್ದು ನಾವೇ ಎಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ. ನಾಲ್ಕು ತಂಡಗಳನ್ನು ರಚಿಸಿ ತರಬೇತಿ ನೀಡಿ ಪೂರ್ವ ನಿಯೋಜಿತವಾಗಿ ಹತ್ಯೆ ಮಾಡಲಾಗಿದೆ. ಪೊಲೀಸರು ಮತ್ತು ನ್ಯಾಯಾಂಗ ನಿಷ್ಪಕ್ಷಪಾತವಾಗಿ ಕೆಲಸ ಮಾಡುತ್ತಿರುವುದರಿಂದ ಜನ ನೆಮ್ಮದಿ ಯಾಗಿದ್ದಾರೆ ಎಂದು ಹೇಳಿದರು.

ಆಚಾರವಿಲ್ಲದ ನಾಲಿಗೆ, ವಿಚಾರ ವಿಲ್ಲದೆ ಚಾಚಿ ಕೊಂಡಿರುವ ನಾಲಿಗೆ ಎಂದು ಪುರಂದರದಾಸರು ಹೇಳಿ ದ್ದಾರೆ. ಎಲುಬಿಲ್ಲದ ನಾಲಿಗೆ ಬಾಯಿ ಗೆ ಬಂದಂತೆ ಮಾತನಾಡಬಾರದು. ನನ್ನನ್ನು ಐಎಸ್‍ಐ ಏಜೆಂಟ್ ಎಂದು ಕರೆದಿರುವ ಮುತಾಲಿಕ್ ಅವರಿಗೆ ದೇವರು ಸದ್ಬುದ್ದಿ ಕೊಡಲಿ. 60-70 ವರ್ಷದ ಜೀವನದಲ್ಲಿ ನಾಲ್ಕು ದಿವಸ ಸಂತೋಷವಾಗಿ ಬಾಳೋಣ. ನಾಲ್ಕೈದು ವರ್ಷ ಇದ್ದು ಹೋಗುವ ರಾಜಕಾರಣಕ್ಕೆ ಯಾಕೆ ತಲೆಕೆಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

ನನ್ನನ್ನು ಐಎಸ್‍ಐ ಏಜೆಂಟ್‍ನೆಂದು ಮಾಡಿರುವ ಟೀಕೆಗೆ ತಲೆಕೆಡಿಸಿಕೊಳ್ಳು ವುದಿಲ್ಲ.ನನಗೆ ಅದರ ಯಾವ ಸಂಪರ್ಕವೂ ಇಲ್ಲ. ಭಾರತದಲ್ಲಿ ಸಾವಿರಾರು ವರ್ಷಗಳಿಂದ ಹಿಂದು ಮುಸ್ಲಿಂರು ಅಣ್ಣತಮ್ಮಂದಿರಂತೆ ಇದ್ದೇವೆ. ಇನ್ನು ಮುಂದೆಯೂ ಸಂತೋಷದಿಂದ ಬದುಕಲು ದಾರಿ ಮಾಡಿ ಕೊಡಿ ಎಂದು ಮನವಿ ಮಾಡಿದರು. ಎಲ್.ಕೆ.ಅಡ್ವಾಣಿ, ವಾಜಪೇಯಿ ಅವರನ್ನು ಹಾಡಿ ಹೊಗಳುತ್ತೇವೆ. ಜಗನ್ನಾಥ್ ರಾವ್ ಜೋಷಿ ಅವರು ನನ್ನೊಂದಿಗೆ ಚುನಾವಣೆಗೆ ನಿಂತಿದ್ದರು. ಅವರದು ಪಕ್ಕ ದೇಶ ಭಕ್ತಿ. ಅವರಿಗೂ ಮತ್ತು ಈಗಿನವರ ದೇಶ ಭಕ್ತಿಗೂ ಹೋಲಿಕೆ ಮಾಡಿದರೆ ನಾನು ಏನು ಹೇಳತ್ತಿದ್ದೇನೆ ಎಂದು ಜನರಿಗೆ ಅರ್ಥವಾಗುತ್ತದೆ ಎಂದು ಇಬ್ರಾಹಿಂ ಹೇಳಿದರು.

Facebook Comments

Sri Raghav

Admin