ವೈದ್ಯಕೀಯ ಕಾಲೇಜುಗಳ ಅಧ್ಯಕ್ಷರೊಂದಿಗೆ ಡಿಕೆಶಿ ಮೀಟಿಂಗ್

ಈ ಸುದ್ದಿಯನ್ನು ಶೇರ್ ಮಾಡಿ

DK-Shivakumar--01
ಬೆಂಗಳೂರು, ಜೂ.18- ವೈದ್ಯಕೀಯ ಕಾಲೇಜುಗಳ ಅಧ್ಯಕ್ಷ ರೊಂದಿಗೆ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಇಂದು ಚರ್ಚೆ ನಡೆಸಿದರು. ಕಾಲೇಜು ಬಗ್ಗೆ ಇರುವ ದೂರು ಗಳು ಸೇರಿದಂತೆ ಮೂಲ ಭೂತ ಸೌಕರ್ಯದ ಕೊರತೆ, ಇನ್ನಿತರೆ ವಿಷಯಗಳ ಬಗ್ಗೆ ಸಭೆಯಲ್ಲಿ ಮಹತ್ವದ ಚರ್ಚೆ ನಡೆಯಿತು. ಅಖಿಲ ಭಾರತ ವೈದ್ಯಕೀಯ ಪರಿಷತ್‍ನಿಂದ ಆಗುತ್ತಿರುವ ಕಿರಿಕಿರಿ, ವಿವಿಧ ಅನುಮತಿಗಳಿಗೆ ಆಗುತ್ತಿರುವ ತೊಂದರೆ ಮತ್ತಿತರ ವಿಚಾರಗಳ ಬಗ್ಗೆ ಮೆಡಿಕಲ್ ಕಾಲೇಜುಗಳ ಮುಖ್ಯಸ್ಥರು ಸಚಿವರ ಗಮನ ಸೆಳೆದರು.

ಸರ್ಕಾರ ನಿಮ್ಮ ಜತೆಗಿದೆ. ಗುಣ ಮಟ್ಟದ ಶಿಕ್ಷಣ ಕೊಡಿ ಹಣಗಳಿಕೆಯೇ ಪ್ರಮುಖ ಉದ್ದೇಶ ವಾಗಬಾರದು. ಬದಲಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವುದು ಪ್ರಮುಖ ಆದ್ಯತೆಯಾಗಲಿ. ಶಿಕ್ಷಣ ಒದಗಿಸುವುದು ಪುಣ್ಯದ ಕೆಲಸ ಎಂದು ಡಿ.ಕೆ.ಶಿವಕುಮಾರ್ ಅಭಿಪ್ರಾಯಪಟ್ಟರು. ನೀವೆಲ್ಲ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೀರಿ, ಪ್ರಾಮಾಣಿಕತೆ ಇರಲಿ, ಬಡವರನ್ನು ದೃಷ್ಟಿ ಯಲ್ಲಿರಿಸಿ ಕೊಂಡು ಶಿಕ್ಷಣ ಸಂಸ್ಥೆಗಳು ಕಾರ್ಯ ನಿರ್ವಹಿಸ ಬೇಕು. ಎಲ್ಲರಿಗೂ ಸೇವೆ ಸಿಗುವಂತಾಗಬೇಕು ಎಂದು ಸಲಹೆ ನೀಡಿದರು.

Facebook Comments

Sri Raghav

Admin