ಪ್ರಮಾಣ ವಚನ ಸ್ವೀಕರಿಸಿದ 11 ಮಂದಿ ನೂತನ ವಿಧಾನಪರಿಷತ್‍ ಸದಸ್ಯರು

ಈ ಸುದ್ದಿಯನ್ನು ಶೇರ್ ಮಾಡಿ

Vidhanaparishat--01

ಬೆಂಗಳೂರು,ಜೂ.18- ವಿಧಾನಪರಿಷತ್‍ಗೆ ಆಯ್ಕೆಯಾದ 11 ಮಂದಿ ಸದಸ್ಯರ ಪ್ರಮಾಣ ವಚನ ಸ್ವೀಕಾರ ಮತ್ತು ನಿವೃತ್ತರಾಗುತ್ತಿರುವ ಸದಸ್ಯರಿಗೆ ಬೀಳ್ಕೊಡುಗೆ ಸಮಾರಂಭ ವನ್ನು ಬ್ಯಾಂಕ್ವೆಟ್ ಹಾಲ್‍ನಲ್ಲಿ ಆಯೋಜಿಸಲಾಗಿತ್ತು. ನೂತನ ವಿಧಾನಪರಿಷತ್ ಸದಸ್ಯರು ವಿಧಾನಸಭಾ ಸಭಾಪತಿ ಅವರ ಕೊಠಡಿಯಲ್ಲಿ ಅಥವಾ ವಿಧಾನಪರಿಷತ್‍ನ ಕಲಾಪದಲ್ಲಿ ಪ್ರಮಾಣ ವಚನ ಸ್ವೀಕರಿಸುವ ಸಂಪ್ರದಾಯ ಮೊದಲಿನಿಂದಲೂ ನಡೆದು ಬಂದಿದೆ.

WhatsApp Image 2018-06-18 at 12.03.24 PM

ಇಂದು ವಿಭಿನ್ನವಾಗಿ ಬ್ಯಾಂಕ್ವೆಟ್ ಹಾಲ್‍ನಲ್ಲಿ ಕಾರ್ಯಕ್ರಮ ಆಯೋಜಿಸಿ ಸಾರ್ವಜನಿಕರು ಭಾಗವಹಿಸಲು ಅವಕಾಶ ಕಲ್ಪಿಸಲಾಗಿತ್ತು. ವಿಧಾನಪರಿಷತ್‍ಗೆ ವಿಧಾನಸಭೆಯಿಂದ ಆಯ್ಕೆಗೊಂಡ ಕಾಂಗ್ರೆಸ್‍ನ ಅರವಿಂದಕುಮಾರ್ ಅರಳಿ, ಸಿ.ಎಂ. ಇಬ್ರಾಹಿಂ, ಕೆ.ಗೋವಿಂದರಾಜ್, ಹರೀಶ್ ಕುಮಾರ್, ಬಿಜೆಪಿಯ ತೇಜಸ್ವಿನಿಗೌಡ, ಕೆ.ಪಿ.ನಂಜುಂಡಿ, ಎನ್. ರವಿಕುಮಾರ್, ರಘುನಾಥ್ ಮಲ್ಕಾಪುರೆ, ಎಸ್.ರುದ್ರೇಗೌಡ ಮತ್ತು ಜೆಡಿಎಸ್‍ನ ಬಿ.ಎಂ.ಫಾರೂಕ್, ಎಸ್.ಎಲ್.ಧರ್ಮೇಗೌಡ ಅವರುಗಳು ನೂತನ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು.

WhatsApp Image 2018-06-18 at 12.03.07 PM

ಬಿ.ಎಂ.ಫಾರೂಕ್ ಅವರು ಅಲ್ಲಾಹುನ ಹೆಸರಿನ ಮೇಲೆ ಮತ್ತು ಉಳಿದ ಎಲ್ಲ ಸದಸ್ಯರು ಭಗವಂತನ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ನಿವೃತ್ತಿಗೊಳ್ಳುತ್ತಿರುವ ಸದಸ್ಯರ ಪೈಕಿ ಮೋಟಮ್ಮ, ಡಿ.ಎಸ್. ವೀರಯ್ಯ, ಎಂ.ಡಿ.ಲಕ್ಷ್ಮೀನಾರಾಯಣ, ರಾಮಚಂದ್ರೇಗೌಡ, ಅಮರ್‍ನಾಥ್ ಪಾಟೀಲ್ ಅವರನ್ನು ಸನ್ಮಾನಿಸ ಲಾಯಿತು. ಎಂ.ಆರ್.ಸೀತಾರಾಮ್, ಭಾನುಪ್ರಕಾಶ್, ಬಿ.ಜೆ.ಪುಟ್ಟಸ್ವಾಮಿ,ಕ್ಯಾಪ್ಟನ್ ಗಣೇಶ್ ಕಾರ್ನಿಕ್, ಸೋಮಣ್ಣ ಬೇವಿನಮರದ್ ಅವರು ಗೈರು ಆಗಿದ್ದರು.

WhatsApp Image 2018-06-18 at 12.02.30 PM

ಜೆಡಿಎಸ್‍ನ ರಮೇಶ್‍ಬಾಬು ಆಗಮಿಸಿದರಾದರೂ ಅವರನ್ನು ಸನ್ಮಾನಕ್ಕೆ ಆರಂಭದಲ್ಲಿ ಆಹ್ವಾನಿಸಲಿಲ್ಲ. ಬಹುಶಃ ಅವರು ಬಂದಿಲ್ಲವೆಂದು ನಿರ್ಲಕ್ಷಿಸಿರಬಹುದೆಂದು ಭಾವಿಸಿದ್ದರು. ಆಗ ಸಭಾಂಗಣದಲ್ಲಿದ್ದ ಕೆಲವರು, ರಮೇಶ್ ಬಾಬು ಹಾಜರಾಗಿರುವುದನ್ನು ವಿಧಾನಪರಿಷತ್‍ನ ಸಚಿವಾಲಯದ ಅ„ಕಾರಿಗಳ ಗಮನಕ್ಕೆ ತಂದರು. ನಂತರ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರು ರಮೇಶ್ ಬಾಬುರವರನ್ನು ವೇದಿಕೆಗೆ ಆಹ್ವಾನಿಸಿ ಸನ್ಮಾನಿಸಿದರು. ನೂತನ ಸದಸ್ಯರಾಗಿರುವವರಿಗೆ ಅಭಿನಂದನೆ ಹೇಳಿದ ಸಭಾಪತಿ, ನಿವೃತ್ತರಾಗುತ್ತಿರುವವರಿಗೆ ಶುಭಹಾರೈಸಿ ಆತ್ಮೀಯವಾಗಿ ಬೀಳ್ಕೊಟ್ಟರು. ಉಪ ಮುಖ್ಯಮಂತ್ರಿ ಪರಮೇಶ್ವರ್, ಕಾನೂನು ಮತ್ತು ವ್ಯವಹಾರ ಸಚಿವ ಕೃಷ್ಣಭೈರೇಗೌಡ, ವಿಧಾನಪರಿಷತ್‍ನ ಸಭಾನಾಯಕಿ ಆಗಿರುವ ಸಚಿವೆ ಜಯಮಾಲಾ, ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ , ಸಂಸದ ಪ್ರಹ್ಲಾದ್ ಜೋಷಿ ಮತ್ತಿತರರು ಕಾರ್ಯಕ್ರಮದಲ್ಲಿ ಇದ್ದರು.

WhatsApp Image 2018-06-18 at 12.03.15 PM

WhatsApp Image 2018-06-18 at 12.02.55 PM

WhatsApp Image 2018-06-18 at 12.01.39 PM

WhatsApp Image 2018-06-18 at 12.01.47 PM

WhatsApp Image 2018-06-18 at 12.02.14 PM

WhatsApp Image 2018-06-18 at 12.02.00 PM

WhatsApp Image 2018-06-18 at 12.00.26 PM

WhatsApp Image 2018-06-18 at 12.01.29 PM

 

Facebook Comments

Sri Raghav

Admin