ತುಮಕೂರು ಪೊಲೀಸ್ ಠಾಣೆಯಲ್ಲಿ ಕಾಲ ಮಿತಿ ಮೀರಿದ ದಾಖಲೆಗಳ ನಾಶ

ಈ ಸುದ್ದಿಯನ್ನು ಶೇರ್ ಮಾಡಿ

Documents
ತುಮಕೂರು,ಜೂ.18- ನಗರ ಪೊಲೀಸ್ ಠಾಣೆಯಲ್ಲಿ ಕಾಲಮಿತಿ ಮೀರಿರುವ ದಾಖಲೆಗಳನ್ನು ಸ್ಥಾಯಿ ಆದೇಶದ ಮೇರೆಗೆ ಉಪವಿಭಾಗದ ಡಿವೈಎಸ್ಪಿ ನಾಗರಾಜ್, ವೃತ್ತ ನಿರೀಕ್ಷಕ ಚಂದ್ರಶೇಖರ್ ಅವರ ನೇತೃತ್ವದಲ್ಲಿ ನಾಶಪಡಿಸ ಲಾಯಿತು. ನಗರ ಠಾಣೆಯ ಹಿಂಭಾಗದಲ್ಲೇ ಸುಮಾರು 42 ರೀತಿಯ ಹಳೆ ದಾಖಲೆಗಳನ್ನು ನಾಶಪಡಿಸಲಾಯಿತು.

ನಾಶಪಡಿಸುವ ಮುನ್ನ ಹಾಗೂ ನಾಶಪಡಿಸುವ ದೃಶ್ಯ, ಪಂಚನಾಮೆಯ ಪೂರ್ಣ ವಿವರಗಳನ್ನು ಎಸ್‍ಪಿ ಅವರಿಗೆ ಕಳುಹಿಸಲಾಯಿತು. ಈ ಸಂದರ್ಭದಲ್ಲಿ ಏನಾದರೂ ಲೋಪಗಳು ಕಂಡುಬಂದರೆ ಡಿವೈಎಸ್‍ಪಿ , ವೃತ್ತ ನಿರೀಕ್ಷಕರು, ಸಬ್‍ಇನ್‍ಸ್ಪೆಕ್ಟರ್ ಅವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಅವರು ಸೂಚನೆ ನೀಡಿದ್ದರು. ಎಲ್‍ಪಿಆರ್‍ಡಿಇ ಮತ್ತು ಪತ್ತೆಯಾಗದ ಪ್ರಕರಣಗಳ ಕುರಿತು ಕಡತಗಳನ್ನು ಹಾಗೂ ಅವಶ್ಯಕವಾಗಿರುವ ಕಡತಗಳನ್ನು ನಾಶ ಮಾಡಬಾರದೆಂದು ಸೂಚನೆ ನೀಡಿದ ಮೇರೆಗೆ ಅ„ಕಾರಿಗಳ ಸಮಕ್ಷಮದಲ್ಲಿ ಇಂದು ದಾಖಲಾತಿಗಳನ್ನು ನಾಶ ಮಾಡಲಾಯಿತು.  ಕಾಲಮಿತಿ ಮೀರಿರುವ ದಾಖಲೆಗಳನ್ನು ಸಂಪೂರ್ಣವಾಗಿ ನಾಶ ಮಾಡುವವರೆಗೂ ಸ್ಥಳದಲ್ಲಿಯೇ ಡಿವೈಎಸ್ಪಿ ನಾಗರಾಜ್, ವೃತ್ತ ನಿರೀಕ್ಷಕ ಚಂದ್ರಶೇಖರ್ ಅವರು ಮೊಕ್ಕಾಂ ಹೂಡಿದ್ದರು.

Facebook Comments

Sri Raghav

Admin