ಮಹಿಳೆಯನ್ನು ನುಂಗಿದ್ದ ದೈತ್ಯ ಹೆಬ್ಬಾವು…! ವೈರಲ್ ಆಯ್ತು ವಿಡಿಯೋ

ಈ ಸುದ್ದಿಯನ್ನು ಶೇರ್ ಮಾಡಿ

Women--01

ಮಕಸರ್. ಇಂಡೇನ್ಷಿಯಾ . ಜೂ.18 : ಇಂಡೋನೇಶ್ಯದ ಹಳ್ಳಿಯೊಂದರಲ್ಲಿ ತಮ್ಮ ಹೊಲಕ್ಕೆ ಹೋಗಿದ್ದ ಮಹಿಳೆಯೊಬ್ಬರು ನಾಪತ್ತೆಯಾದರು. ಮರುದಿನ ಇದೇ ಸ್ಥಳದಲ್ಲಿ ಬಾತುಹೋಗಿದ್ದ ದೈತ್ಯ ಹೆಬ್ಬಾವೊಂದು ಪತ್ತೆಯಾಯಿತು. ಅದರ ಹೊಟ್ಟೆಯಲ್ಲಿ ಮಹಿಳೆ ಪತ್ತೆಯಾದರು. ಈ ದೃಶ್ಯವಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Indonesian-woman-goes-missing-later-found-inside-the-belly-of-a-23-foot-long-python

ಇಂಡೋನೇಷ್ಯಾದ ಮುನ ದ್ವೀಪದ ಪರ್ಸಿಯಪಲ್ ಲವೇಲ ಗ್ರಾಮದಲ್ಲಿ ಪತ್ತೆಯಾದ 7 ಮೀಟರ್ ಉದ್ದರ ಹೆಬ್ಬಾವಿನ ಹೊಟ್ಟೆಯನ್ನು ಸೀಳಿ ನೋಡಿದಾಗ ಅದರಲ್ಲಿ 54 ವರ್ಷದ ಮಹಿಳೆಯ ದೇಹ ಪತ್ತೆಯಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಜಮೀನಿಗೆ ಹೋದ ಮಹಿಳೆ ರಾತ್ರಿ ಹಿಂದಿರುಗಿ ಬಾರದಾಗ ಸಂಬಂಧಿಕರು ಹಾಗೂ ಗ್ರಾಮಸ್ಥರು ಗಾಬರಿಗೊಂಡರು. ಗ್ರಾಮಸ್ಥರು ಆಕೆಯ ಹುಡುಕಾಟದಲ್ಲಿ ತೊಡಗಿದ್ದಾಗ ಮಹಿಳೆಯ ಚಪ್ಪಲಿ ಮತ್ತು ಕತ್ತಿಯಿದ್ದ ಸ್ಥಳದಿಂದ 30 ಮೀಟರ್ ದೂರದಲ್ಲಿ ಹೆಬ್ಬಾವು ಪತ್ತೆಯಾಗಿತ್ತು. ಮಹಿಳೆ ನಾಪತ್ತೆಯಾಗಿದ್ದರಿಂದ ಹೆಬ್ಬಾವೇ ಮಹಿಳೆಯನ್ನು ನುಂಗಿರಬಹುದು ಎಂದು ಅದನ್ನು ಕೊಂದು ಸ್ಥಳೀಯರು ಹೆಬ್ಬಾವಿನ ಹೊಟ್ಟೆ ಸೀಳಿ ನೋಡಿದಾಗ ಮಹಿಳೆ ಮೃತದೇಹ ಪತ್ತೆಯಾಗಿದೆ. ಕಳೆದ ವರ್ಷದ ಮಾರ್ಚ್‌ನಲ್ಲಿ ಇದೇ ದೇಶದ ಸುಲವೆಸಿ ದ್ವೀಪದ ಗ್ರಾಮವೊಂದರಲ್ಲಿ ರೈತರೊಬ್ಬರನ್ನು ಹೆಬ್ಬಾವು ಇಡೀಯಾಗಿ ನುಂಗಿರುವುದನ್ನು ಸ್ಮರಿಸಬಹುದಾಗಿದೆ.

4e9eb14d-bf7a-4f34-94d5-ed7984aa0824_750x422

hhhh-3

python_660_112913110828

Facebook Comments

Sri Raghav

Admin