ಹೋಟೆಲ್‍ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ನಾಲ್ವರು ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Hotel-mFire--01

ಲಕ್ನೋ, ಜೂ.19- ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿನ ಎರಡು ಹೋಟೆಲ್‍ಗಳಲ್ಲಿ ಸಂಭವಿಸಿದ ಪ್ರತ್ಯೇಕ ಅಗ್ನಿ ಆಕಸ್ಮಿಕಗಳಲ್ಲಿ ನಾಲ್ವರು ಮೃತಪಟ್ಟು, ಐವರು ತೀವ್ರ ಗಾಯಗೊಂಡಿದ್ದಾರೆ. ಲಕ್ನೋದ ರೈಲು ನಿಲ್ದಾಣದ ಬಳಿ ಚಾರ್‍ಭಾಗ್‍ನ ದೂದ್‍ಮಂಡಿ ಪ್ರದೇಶದ ಎರಡು ಹೋಟೆಲ್‍ಗಳಲ್ಲಿ ಇಂದು ಬೆಳಗ್ಗೆ 6 ಗಂಟೆಯಲ್ಲಿ ಈ ದುರ್ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಕಿ ಆಕಸ್ಮಿಕಗಳಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ತೀವ್ರ ಸುಟ್ಟ ಗಾಯಗಳಾಗಿರುವ ಐವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಲಕ್ನೋ ಪಶ್ಚಿಮ) ವಿಕಾಸ್‍ಚಂದ್ ತ್ರಿಪಾಠಿ ತಿಳಿಸಿದ್ದಾರೆ. ಈ ದುರಂತದಲ್ಲಿ ಅಪಾಯಕ್ಕೆ ಸಿಲುಕಿದ್ದ 55 ಜನರನ್ನು ರಕ್ಷಿಸಲಾಗಿದೆ.

Facebook Comments

Sri Raghav

Admin