ಗೃಹ ಪ್ರವೇಶ ಸಮಾರಂಭದಲ್ಲಿ ಭೋಜನ ಸೇವಿಸಿ 3 ಮಕ್ಕಳ ದುರ್ಮರಣ

ಈ ಸುದ್ದಿಯನ್ನು ಶೇರ್ ಮಾಡಿ

meal

ಮುಂಬೈ, ಜೂ.19-ಕಲುಷಿತ ಆಹಾರ ಸೇವನೆಯಿಂದ ಮೂವರು ಮಕ್ಕಳು ಮೃತಪಟ್ಟು, ಇತರ 40ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿರುವ ಘಟನೆ ಮಹಾರಾಷ್ಟ್ರದ ರಾಯ್‍ಗಢ ಜಿಲ್ಲೆಯಲ್ಲಿ ಸಂಭವಿಸಿದೆ. ಲಾಪುರ್ ಪ್ರದೇಶದ ಮಹದ್ ಗ್ರಾಮದಲ್ಲಿ ಸುಭಾಷ್ ಮಾನೆ ಎಂಬುವರು ನಿನ್ನೆ ರಾತ್ರಿ ಗೃಹ ಪ್ರವೇಶ ಸಮಾರಂಭ ಆಯೋಜಿಸಿದ್ದರು. ಇಲ್ಲಿ ಭೋಜನ ಸೇವಿಸಿದ ನಂತರ ಮಕ್ಕಳೂ ಸೇರಿದಂತೆ 50ಕ್ಕೂ ಹೆಚ್ಚು ಅತಿಥಿಗಳಿಗೆ ವಾಂತಿ-ಬೇಧಿಯಾಗಿ ಆಸ್ಪತ್ರೆಗೆ ದಾಖಲಾದರು.  ಚಿಕಿತ್ಸೆ ಫಲಿಸದೇ ಮೂವರು ಮಕ್ಕಳು ಮೃತಪಟ್ಟರು ರಂದು ರಾಯ್‍ಗಢ್ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಪರಸ್ಕರ್ ತಿಳಿಸಿದ್ದಾರೆ. ಅಸ್ವಸ್ಥರಾಗಿರುವ 40ಕ್ಕೂ ಹೆಚ್ಚು ಜನರಲ್ಲಿ ಕೆಲವರ ಸ್ಥಿತಿ ಶೋಚನೀಯವಾಗಿದೆ.

Facebook Comments

Sri Raghav

Admin