ಹೊತ್ತಿ ಉರಿದ ಪೆಟ್ರೋಲ್ ಟ್ಯಾಂಕರ್, ಓರ್ವ ಸಜೀವ ದಹನ, 15 ಮನೆ ಬೆಂಕಿಗಾವುತಿ

ಈ ಸುದ್ದಿಯನ್ನು ಶೇರ್ ಮಾಡಿ

ಚಿಕ್ಕಮಗಳೂರು, ಜೂ.19-ಪೆಟ್ರೋಲ್ ಟ್ಯಾಂಕರ್ ಪಲ್ಟಿಯಾಗಿ ಓರ್ವ ಸಜೀವ ದಹನಗೊಂಡಿರುವ ಘಟನೆ ಅಜ್ಜಂಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ. ಕಡೂರು ತಾಲೂಕಿನ ಗಿರಿಯಾಪುರದಲ್ಲಿ ಈ ದುರ್ಘಟನೆ ಸಂಭವಿಸಿದೆ. ಪೆಟ್ರೋಲ್ ಟ್ಯಾಂಕರ್ ಉರುಳಿಬಿಪೆಟ್ರೋಲ್ ಟ್ಯಾಂಕರ್ ಪಲ್ಟಿಯಾಗಿ ಪರಿಣಾಮ ೧೫ ಮನೆಗಳು ಬೆಂಕಿಗೆ ಆಹುತಿಯಾಗಿದ್ದು, ಮನೆಯಲ್ಲಿದ್ದವರು ಬೆಂಕಿಗೆ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. 100 ಮೀಟರ್ ವ್ಯಾಪ್ತಿಯಲ್ಲಿ ಹಬ್ಬಿರುವ ಅಗ್ನಿ ಜ್ವಾಲೆಯನ್ನು ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸಪಡುತ್ತಿದ್ದಾರೆ. ಅಜ್ಜಂಪುರ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಟ್ಯಾಂಕರ್ ಕಡೂರಿನಿಂದ ಹೊಸದುರ್ಗದ ಕಡೆ ಸಾಗುತ್ತಿತ್ತು. ಗಿರಿಯಾಪುರಕ್ಕೆ ಸಮೀಪಿಸಿದ್ದ ಟ್ಯಾಂಕರ್ ರಸ್ತೆ ತಿರುವಿನಲ್ಲಿ ಸಾಗುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ. ಬಿದ್ದ ರಭಸಕ್ಕೆ ಬೆಂಕಿ ಆವರಿಸಿಕೊಂಡಿದೆ. ಘಟನೆಯಿಂದಾಗಿ ಸ್ಥಳೀಯರು ಆತಂಕಕ್ಕಿಡಾಗಿದ್ದಾರೆ.

petrol-tanker-fire

Facebook Comments