ಛತ್ತೀಸ್‍ಗಢದಲ್ಲಿ ನಕ್ಸಲರ ಜೊತೆ ಎನ್‍ಕೌಂಟರ್ ವೇಳೆ ಪೊಲೀಸರಿಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

STF-Naxal--01
ರಾಯ್‍ಪುರ್, ಜೂ.19-ಛತ್ತೀಸ್‍ಗಢದ ಕಂಕೇರ್ ಜಿಲ್ಲೆಯಲ್ಲಿ ನಕ್ಸಲರ ಜೊತೆ ನಡೆದ ಎನ್‍ಕೌಂಟರ್‍ನಲ್ಲಿ ಕೆಲವು ಪೊಲೀಸರು ಗಾಯರೊಂಡಿದ್ದಾರೆ. ಟಮೊರಾ ಗ್ರಾಮದ ಬಳಿ ಅರಣ್ಯದಲ್ಲಿ ನಿನ್ನೆ ರಾತ್ರಿ ಮಾವೋವಾದಿಗಳಿಗಾಗಿ ಶೋಧ ನಡೆಸುತ್ತಿದ್ದರು. ಆಗ ಜಿಲ್ಲಾ ಮೀಸಲು ಗಾರ್ಡ್(ಡಿಆರ್‍ಜಿ) ಸಿಬ್ಬಂದಿ ಮೇಲೆ ನಕ್ಸಲರು ಗುಂಡು ಹಾರಿಸಿದರು. ಈ ಸಂದರ್ಭದಲ್ಲಿ ನಡೆದ ಎನ್‍ಕೌಂಟರ್‍ನಲ್ಲಿ ಕೆಲವು ಪೊಲೀಸರಿಗೆ ಗಾಯಗಳಾಗಿವೆ. ಗುಂಡಿನ ಕಾಳಗದಲ್ಲಿ ಪೊಲೀಸರ ಕೈ ಮೇಲಾಗುತ್ತಿದ್ದಂತೆ ಮಾವೋವಾದಿಗಳು ಕತ್ತಲಲ್ಲಿ ಪರಾರಿಯಾದರು. ನಕ್ಸಲರಿಗಾಗಿ ಆ ಪ್ರದೇಶದಲ್ಲಿ ತೀವ್ರ ಶೋಧ ಮುಂದುವರಿದಿದೆ.

Facebook Comments

Sri Raghav

Admin