ವಿಶ್ವಕಪ್ ಫುಟ್ಬಾಲ್ : 2-1 ಗೋಲ್ ಅಂತರದಲ್ಲಿ ಟ್ಯುನೇಶಿಯಾವನ್ನು ಬಗ್ಗು ಬಡಿದ ಆಂಗ್ಲ ಪಡೆ

ಈ ಸುದ್ದಿಯನ್ನು ಶೇರ್ ಮಾಡಿ

football-england

ವೋಲ್ಗೋರ್ಗಾಡ್, ಜೂ.19- ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ನಾಯಕ ಹ್ಯಾರಿ ಕೇನ್ ಭಾರಿಸಿದ ಎರಡು ಭರ್ಜರಿ ಗೋಲುಗಳ ನೆರವಿನಿಂದ ಇಂಗ್ಲೆಂಡ್ ಟ್ಯುನೇಶಿಯಾವನ್ನು 2-1 ಗೋಲುಗಳಿಂದ ಮಣಿಸಿ ಶುಭಾರಂಭ ಮಾಡಿದೆ.  ಫಿಫಾ ಫುಟ್ಬಾಲ್ ಮಹಾಸಮರದಲ್ಲಿ ಇಂಗ್ಲೆಂಡ್ ಕಳಪೆ ಆಟ ಪ್ರದರ್ಶಿಸುತ್ತಿದೆ ಎಂದು ಅಭಿಮಾನಿಗಳು ಕೊರಗುವ ಸ್ಥಿತಿಯಲ್ಲಿದ್ದಾಗ ನಾಯಕ ಕೇನ್ ಜವಾಬ್ದಾರಿಯುತ ಆಟ ಪ್ರದರ್ಶಿಸಿದರು.

ಗ್ರೂಪ್ ಜಿ ಪಂದ್ಯದ 11ನೆ ನಿಮಿಷದಲ್ಲೇ ಟ್ಯುನೇಶಿಯಾ ಗೋಲ್‍ಕೀಪರ್ ಮಜಿ ಹುಸೇನ್ ಅವರನ್ನು ವಂಚಿಸಿ ಕೇನ್ ಯಶಸ್ವಿಯಾಗಿ ಒಂದು ಗೋಲು ಬಾರಿಸಿದರು.
91ನೇ ನಿಮಿಷದಲ್ಲಿ ಇಂಗ್ಲೆಂಡ್ ನಾಯಕ ಹೆಡ್ಡರ್ ಬಾಲನ್ನು ಗೋಲ್ ಆಗಿ ಪರಿವರ್ತಿಸಿ ನಿರ್ಣಾಯಕ ಗೆಲುವಿನ ಗೋಲಿನ ಕೊಡುಗೆ ನೀಡಿದರು.  ಕೇನ್ ಅವರ ಗೋಲುಗಳಿಂದಾಗಿ ವಿಶ್ವಕಪ್ ಫುಟ್ಬಾಲ್ ಪಂದ್ಯದಲ್ಲಿ ಭರವಸೆ ಮೂಡಿಸಿದೆ.  ಇಂಗ್ಲೆಂಡ್ ಆಕ್ರಮಣಕಾರಿ ಪ್ರದರ್ಶನ ನೀಡಿದ್ದರೂ, ತನಗೆ ಸಿಕ್ಕ ಹೊಡೆತ ಸುಲಭ ಒದೆತಗಳನ್ನು ಗೋಲುಗಳಾಗಿ ಪರಿವರ್ತಿಸಲು ಇಂಗ್ಲೆಂಡ್ ವಿಫಲವಾಗಿದ್ದು ಅಭಿಮಾನಿಗಳಲ್ಲಿ ಬೇಸರಕ್ಕೆ ಕಾರಣವಾಯಿತು. ಆದರೂ ತಂಡ ಗೆಲುವು ಸಾಧಿಸಿದ್ದಕ್ಕೆ ನಿಟ್ಟುಸಿರು ಬಿಟ್ಟರು. ಕ್ರುವೇಶಿಯಾ ಸತತ ಹೋರಾಟ ನಡೆಸಿ ಪಂದ್ಯವನ್ನು ಡ್ರಾ ಮಾಡಿಕೊಳ್ಳಲು ಕಾರ್ಯ ತಂತ್ರ ರೂಪಿಸಿದ್ದರಾದರೂ ಇಂಗ್ಲೆಂಡ್‍ನ ಮುಂಚೂಣಿ ಆಟಗಾರ ಹ್ಯಾರಿ ಅವರ ಚಮತ್ಕಾರಿ ಆಟ ಆ ಕನಸನ್ನು ನುಚ್ಚು ನೂರು ಮಾಡಿತು.

 

Facebook Comments

Sri Raghav

Admin