ತಮ್ಮನ ಸಾವಿನ ಸುದ್ದಿ ಕೇಳಿ ಪ್ರಾಣಬಿಟ್ಟ ಅಣ್ಣ, ಸಾವಿನಲ್ಲೂ ಒಂದಾದ ಸಹೋದರರು

ಈ ಸುದ್ದಿಯನ್ನು ಶೇರ್ ಮಾಡಿ

Brothers--01
ದೇವನಹಳ್ಳಿ, ಜೂ.20-ಹುಟ್ಟುತ್ತಾ ಹುಟ್ಟುತ್ತಾ ಅಣ್ಣತಮ್ಮಂದಿರು, ಬೆಳೆಯುತ್ತಾ ದಾಯಾದಿಗಳು ಎಂಬ ಗಾದೆ ಮಾತಿದೆ. ಇದಕ್ಕೆ ತದ್ವಿರುದ್ಧವಾಗಿ ಸಹೋದರರಿಬ್ಬರು ಸಾವಿನಲ್ಲೂ ಒಂದಾದ ಮನಕಲಕುವ ಘಟನೆ ತಾಲೂಕಿನ ವಿಜಯಪುರದಲ್ಲಿ ನಡೆದಿದೆ. ವಿಜಯಪುರ ನಿವಾಸಿಗಳಾದ ಮುನೀಂದ್ರ(30) ಮತ್ತು ಈತನ ಅಣ್ಣ ಕೃಷ್ಣಪ್ಪ (45) ಸಾವಿನಲ್ಲೂ ಒಂದಾದ ಸಹೋದರರು.

ಹಲವಾರು ದಿನಗಳಿಂದ ಮುನೀಂದ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ದುರಾದೃಷ್ಟವೆಂಬಂತೆ ನಿನ್ನೆ ಚಿಕಿತ್ಸೆ ಫಲಕಾರಿಯಾಗದೆ ಮುನೀಂದ್ರ ಸಾವನ್ನಪ್ಪಿದ್ದಾರೆ. ತಮ್ಮನ ಸಾವಿನ ಸುದ್ದಿ ತಿಳಿದ ಅಣ್ಣ ಕೃಷ್ಣಪ್ಪ ಸ್ಥಳದಲ್ಲೇ ಕುಸಿದು ಬಿದ್ದು ಹೃದಯಾಘಾತದಿಂದ ಅಸುನೀಗಿದ್ದಾರೆ. ಅಣ್ಣ-ತಮ್ಮಂದಿರ ಸಾವಿನಿಂದ ಮನೆ ಶೋಕಸಾಗರದಲ್ಲಿ ಮುಳುಗಿದೆ.

Facebook Comments

Sri Raghav

Admin