ಹುತಾತ್ಮ ಯೋಧನ ಕುಟುಂಬಕ್ಕೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಸಾಂತ್ವನ

ಈ ಸುದ್ದಿಯನ್ನು ಶೇರ್ ಮಾಡಿ

nirmala
ಜಮ್ಮು, ಜೂ.20(ಪಿಟಿಐ) – ಉಗ್ರರಿಂದ ಅಪಹರಿಸಲ್ಟಟ್ಟು ಚಿತ್ರಹಿಂಸೆಗೆ ಗುರಿಯಾಗಿ ಹುತಾತ್ಮನಾದ ಯೋಧ ಔರಂಗಜೇಬ್ ಮನೆಗೆ ಇಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿ ಮಾಡಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.  ಪೂಂಚ್ ಜಿಲ್ಲೆಯ ಗಡಿ ಭಾಗ ದಲ್ಲಿರುವ ಸಲಾನಿ ಕುಗ್ರಾಮದ ಹುತಾತ್ಮ ಯೋಧನ ಮನೆಗೆ ತೆರಳಿದ ಅವರು, ಉಗ್ರರ ಕೃತ್ಯವನ್ನು ಖಂಡಿಸಿದರು. ಹುತಾತ್ಮ ಯೋಧನ ಗುಣಗಾನ ಮಾಡಿದರು. ಔರಂಗಜೇಬ್ ದೇಶಕ್ಕೆ ಸ್ಪೂರ್ತಿ ಯಾಗಿದ್ದಾರೆ ಎಂದು ಬಣ್ಣಿಸಿದ ಸಚಿವರು ಕುಟಂಬದವರನ್ನು ಸಮಾಧಾನಪಡಿಸಿದರು.  44ನೆ ರಾಷ್ಟ್ರೀಯ ರೈಫಲ್ಸ್‍ನಲ್ಲಿ ರೈಫಲ್ ಮ್ಯಾನ್ ಆಗಿದ್ದ ಔರಂಗ ಜೇಬ್‍ನನ್ನು ರಂಜಾನ್‍ಗೆ ಎರಡು ದಿನಗಳ ಮೊದಲು ಶಂಕಿತ ಹಿಜ್ ಬುಲ್ ಉಗ್ರರು ಅಪಹರಿಸಿ ಚಿತ್ರ ಹಿಂಸೆ ನೀಡಿ ಕೊಂದು ಹಾಕಿದ್ದರು.

Facebook Comments