ಫಿಫಾ ವಿಶ್ವ ಕಪ್ : ಪ್ರಿಕ್ವಾರ್ಟರ್ ಫೈನಲ್‍ ಪ್ರವೇಶಿಸಿದ ಅತಿಥೇಯ ರಷ್ಯಾ

ಈ ಸುದ್ದಿಯನ್ನು ಶೇರ್ ಮಾಡಿ

Rassia--01

ಸೇಂಟ್ ಪೀಟರ್ಸ್‍ಬರ್ಗ್, ಜೂ.20-ಅತಿಥೇಯ ರಷ್ಯಾ 21ನೇ ಪ್ರತಿಷ್ಠತಿ ಫಿಫಾ ವಿಶ್ವ ಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಪ್ರಿಕ್ವಾರ್ಟರ್ ಪ್ರವೇಶಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.  ಸೇಂಟ್ ಪೀಟರ್ಸ್‍ಬರ್ಗ್‍ನಲ್ಲಿ ನಿನ್ನೆ ರಾತ್ರಿ ನಡೆದ ರೋಚಕ ಹಣಾಹಣಿಯಲ್ಲಿ ಈಜಿಪ್ಟ್ ತಂಡವನ್ನು 3-1 ಗೋಲುಗಳಿಂದ ಮಣಿಸಿದ ರಷ್ಯಾ ಅಂತಿಮ 16ರ ಸುತ್ತಿಗೆ ಅರ್ಹತೆ ಪಡೆದಿದೆ.

ದ್ವಿತೀಯಾರ್ಧದಲ್ಲಿ ಕೇವಲ 15 ನಿಮಿಷಗಳ ಅಂತರದಲ್ಲಿ ಮೂರು ಗೋಲುಗಳನ್ನು ಗಳಿಸಿದ ರಷ್ಯಾ ಆಟಗಾರರು ಈಜಿಪ್ಟ್ ವಿರುದ್ಧ ಪ್ರಾಬಲ್ಯ ಸಾಧಿಸಿದರು. ಈಜಿಪ್ಟ್‍ನ ರಕ್ಷಣ ಆಟಗಾರ (ಡಿಫೆಂಡರ್) ಅಹಮದ್ ಫ್ಯಾತಿ ತಪ್ಪಿನಿಂದ ದಾಖಲಾದ ಸ್ವಯಂ ಗೋಲು ರಷ್ಯಾಗೆ ವರದಾನವಾಯಿತು. ಇದರಿಂದ ಮುನ್ನಡೆ ಪಡೆದ ರಷ್ಯಾ ಹಿಂದಿರುಗಿ ನೋಡಲೇ ಇಲ್ಲ. ರಷ್ಯಾದ ಗೋಲ್ಮಿಂಚಿನ ಆರ್ಭಟವನ್ನು ನಿಯಂತ್ರಿಸುವಲ್ಲಿ ಈಜಿಪ್ಟ್ ವಿಫಲವಾಯಿತು.

ರಷ್ಯಾ ಪರವಾಗಿ ಡೆನಿಸ್ ಚೆರಿಶೇವ್ ಮತ್ತು ಆರ್ಟೆಮ್ ಡಿಜ್ಯುಬಾ ತಲಾ ಒಂದೊಂದು ಗೋಲು ಬಾರಿಸಿದರು. ಬಳಕ 73ನೇ ನಿಮಿಷದಲ್ಲಿ ಪೆನಾಲ್ಟಿ ಪಡೆದ ಈಜಿಪ್ಟ್‍ಗೆ ಮಹಮದ್ ಸಲಾ ಮೊದಲ ಗೋಲು ಗಳಿಸಿಕೊಟ್ಟರು. ರಷ್ಯಾದ ಡೆನಿಸ್ ಚೆರಿಶೇವ್‍ಗೆ ಇದು ಈ ಟೂರ್ನಿಯಲ್ಲಿ ಮೂರನೇ ಗೋಲು. ಇದರೊಂದಿಗೆ ಪೋರ್ಚುಗಲ್‍ನ ಸ್ಟಾರ್ ಆಟಗಾರ ಕ್ರಿಸ್ಟಿಯಾನೋ ರೋನಾಲ್ಡೊ ಅವರೊಂದಿಗೆ ಪಟ್ಟಿಯಲ್ಲಿ ಸಮಬಲ ಸಾಧಿಸಿದ್ದಾರೆ.

Facebook Comments

Sri Raghav

Admin