ಏರ್ ಇಂಡಿಯಾ ವಿಮಾನಕ್ಕೆ ಪಕ್ಷಿ ಡಿಕ್ಕಿ, 131 ಪ್ರಯಾಣಿಕರು ಪಾರು

ಈ ಸುದ್ದಿಯನ್ನು ಶೇರ್ ಮಾಡಿ

Air-India--01
ಚೆನ್ನೈ,ಜೂ.20(ಪಿಟಿಐ)-ದೆಹಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನಕ್ಕೆ ಪಕ್ಷಿಯೊಂದು ಬಡಿದ ಪರಿಣಾಮ ಸುರಕ್ಷತೆ ದೃಷ್ಟಿಯಿಂದ 131 ಪ್ರಯಾಣಿಕರನ್ನು ವಿಮಾನನಿಲ್ದಾಣಕ್ಕೆ ವಾಪಸ್ ಕರೆತಂದ ಘಟನೆ ಚೆನ್ನೈನಲ್ಲಿ ಇಂದು ಬೆಳಗ್ಗೆ ನಡೆದಿದೆ. ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ.  ಎಐ-400 ಸಂಖ್ಯೆಯ ವಿಮಾನ ಹಾರಾಟದಲ್ಲಿದ್ದಾಗ ಹಕ್ಕಿಯೊಂದು ಅದಕ್ಕೆ ಬಡಿಯಿತು. ಸುಮಾರು 20 ನಿಮಿಷಗಳ ಗಗನದಲ್ಲಿದ್ದ ವಿಮಾನ ನಂತರ ಚೆನ್ನೈನ ವಿಮಾನ ನಿಲ್ದಾಣಕ್ಕೆ ಹಿಂದಿರುಗಿತು. ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಹಾಗೂ ಅವರಿಗೆ ಪರ್ಯಾಯ ವಿಮಾನಗಳ ಮೂಲಕ ದೆಹಲಿ ಪಯಣಕ್ಕೆ ಅನುವು ಮಾಡಿಕೊಡಲಾಯಿತು ಎಂದು ಏರ್ ಇಂಡಿಯಾ ವಕ್ತಾರರೊಬ್ಬರು ಹೇಳಿದ್ದಾರೆ.

Facebook Comments

Sri Raghav

Admin