‘ವಾಟಾಳ್ ಸ್ಪೆಷಲ್’ ಯೋಗ ಭಂಗಿಗಳು ಹೇಗಿವೆ ನೋಡಿ

ಈ ಸುದ್ದಿಯನ್ನು ಶೇರ್ ಮಾಡಿ

Vatal-Yoga--01

ಬೆಂಗಳೂರು,ಜೂ.20- ಅನಾರೋಗ್ಯಕ್ಕೆ ಒಳಗಾದ ಎಲ್ಲಾ ಬಡವರ ಚಿಕಿತಾ ವೆಚ್ಚವನ್ನು ಸಂಪೂರ್ಣವಾಗಿ ಸರ್ಕಾರವೇ ಭರಿಸಬೇಕೆಂದು ಕನ್ನಡ ಚಳುವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಆಗ್ರಹಿಸಿದರು. ಅಂತಾರಾಷ್ಟ್ರೀಯ ಯೋಗ ದಿನದ ಮುನ್ನಾ ದಿನವಾದ ಇಂದು ಖಾಸಾಗಿ ಹೋಟೇಲ್ ಸಭಾಂಗಣದಲ್ಲಿ ಯೋಗದ ವಿವಿಧ ಕ್ಲಿಷ್ಟಕರ ಆಸನಗಳನ್ನು ಪ್ರದರ್ಶಿಸಿ ಮಾತನಾಡಿದರು. ಬಡವರಿಗೆ ಉತ್ತಮ ಸೌಲಭ್ಯ ಸಿಗುವ ನಿಟ್ಟಿನಲ್ಲಿ ಮೊದಲು ಸಕಾರಿ ಆಸ್ಪತ್ರೆಗಳು ಸುಧಾರಣೆಯಾಗಬೇಕು. ಕ್ಯಾನ್ಸರ್ ಸೇರಿದಂತೆ ಹೃದಯಾ, ಶ್ವಾಸ ಕೋಶ, ಕಿಡ್ನಿ ಯ ವಿವಿಧ ಸಮಸ್ಯೆಗಳಿಗೆ ಉಚಿತವಾಗಿ ಸರ್ಕಾರದಿಂದ ಚಿಕಿತ್ಸೆ ದೊರೆಯುವಂತಾಗ ಬೇಕು ಎಂದರು. ಪ್ರಧಾನಿ ಮೋದಿಯವರು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸುತ್ತಿರುವುದು ಶ್ಲಾಘನೀಯ ಎಂದರು. ಈ ವೇಳೆ ವಾಟಾಳ್ ಪಕ್ಷದ ಪಾರ್ಥಸಾರಥಿ, ರಾಮು, ನಾರಾಯಣ ಸ್ವಾಮಿ , ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.

Vatal--01

Vatal--02

Vatal--03

Vatal--04

Vatal--05

 

Facebook Comments

Sri Raghav

Admin