ಮಹಾರಾಷ್ಟ್ರದ ಥಾಣೆಯಲ್ಲಿ ಬೆಂಕಿ ಆಕಸ್ಮಿಕಕ್ಕೆ 10 ಉಗ್ರಾಣಗಳು ಭಸ್ಮ

ಈ ಸುದ್ದಿಯನ್ನು ಶೇರ್ ಮಾಡಿ

Fire--01

ಥಾಣೆ, ಜೂ.21- ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಮುಂಬ್ರಾ ನಗರದಲ್ಲಿ ಇಂದು ನಸುಕಿನಲ್ಲಿ ಸಂಭವಿಸಿದ ಬೆಂಕಿ ಆಕಸ್ಮಿಕದಲ್ಲಿ 10 ಉಗ್ರಾಣಗಳು ಭಸ್ಮವಾಗಿವೆ. ಅದೃಷ್ಟವಶಾತ್ ಈ ದುರಂತದಲ್ಲಿ ಸಾವು-ನೋವಿನ ವರದಿಯಾಗಿಲ್ಲ. ಟೈರ್‍ಗಳು ಹಾಗೂ ಚಿಂದಿ ಬಟ್ಟೆಗಳನ್ನು ಸಂಗ್ರಹಿಸಡಲಾಗಿದ್ದ ಗೋದಾಮು ಒಂದರಲ್ಲಿ 4ರ ನಸುಕಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ನಂತರ ಇತರ ಒಂಭತ್ತು ಉಗ್ರಾಣಗಳಲ್ಲಿ ಬೆಂಕಿಯ ಜ್ವಾಲ್ವೆ ವ್ಯಾಪಿಸಿ ಧಗಧಗಿಸಿತು.  ಈ ಪ್ರದೇಶದಲ್ಲಿ ನಿಲ್ಲಿಸಲಾಗಿದ್ದ ಕೆಲವು ದ್ವಿಚಕ್ರ ವಾಹನಗಳೂ ಕೂಡ ಬೆಂಕಿಗಾಹುತಿಯಾಗಿವೆ.   ಸುದ್ದಿ ತಿಳಿದ ಕೂಡಲೇ ಮೂರು ಅಗ್ನಿಶಾಮಕ ವಾಹನಗಳೊಂದಿಗೆ ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಅಗ್ನಿಯ ಕೆನ್ನಾಲಿಗೆಯನ್ನು ಶಮನಗೊಳಿಸಿದರು.

Facebook Comments

Sri Raghav

Admin