ಸರ್ವಂ ಯೋಗ ಮಯಂ : ಭಾನು, ಭೂಮಿ, ಜಲದಲ್ಲೂ ಯೋಗಾಯೋಗ

ಈ ಸುದ್ದಿಯನ್ನು ಶೇರ್ ಮಾಡಿ

Yoga-Dy-2018

ನವದೆಹಲಿ, ಜೂ.21-ಇಂದು 4ನೇ ಅಂತಾರಾಷ್ಟ್ರೀಯ ಯೋಗ ದಿನ. ವಿಶ್ವಾದ್ಯಂತ ಯೋಗಾಭ್ಯಾಸ ಮಾಡುವ ಮೂಲಕ ಈ ವಿಶಿಷ್ಟ ದಿನವನ್ನು ವಿಶೇಷ ರೀತಿಯಲ್ಲಿ ಆಚರಿಸಲಾಗುತ್ತಿದೆ. ಭಾರತದಲ್ಲಂತೂ ಯೋಗ ದಿನಾಚರಣೆಯನ್ನು ಅತ್ಯಂತ ಸಡಗರ-ಸಂಭ್ರಮದಿಂದ ಆಚರಿಸಲಾಗುತ್ತಿದೆ. ಭಾನು, ಭುವಿ, ಜಲ ಎಲ್ಲೆಡೆ ಯೋಗಾಸನ ಮಾಡುವ ಮೂಲಕ ವಿನೂತನ ರೀತಿಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗಿದ್ದು, ಸರ್ವ ಯೋಗ ಮಯಂ ಎಂಬ ವಾತಾವರಣ ನಿರ್ಮಾಣವಾಗಿತ್ತು.

26-yogaday_5

ಗಗನದಲ್ಲಿ ಯೋಗ: ಭಾರತೀಯ ವಾಯುಪಡೆಯ ಪ್ಯಾರಾಟ್ರೂಪರ್ ಟ್ರೇನಿಂಗ್ ಸ್ಕೂಲ್‍ನ ತರಬೇತುದಾರರಾದ ವಿಂಗ್ ಕಮಾಂಡರ್‍ಗಳಾದ ಕೆ.ಬಿ.ಎಸ್.ಸಮಯಲ್ ಮತ್ತು ಗಜಾನಂದ್ ಯಾದವ್ ಭೂಮಿಯಿಂದ 15,000 ಅಡಿ ಎತ್ತರದ ನೀಲಾಕಾಶದಲ್ಲಿ ಯೋಗಾಭ್ಯಾಸ ಮಾಡುವ ಮೂಲಕ ವಿಶೇಷ ಗಮನ ಸೆಳೆದರು. ಉತ್ತಮ ಆರೋಗ್ಯ, ಶಾಂತಿ, ಸಂತೋಷ ಸಮೃದ್ಧಿ ಮತ್ತು ಸೌಹಾರ್ದತೆ ಸಂದೇಶ ಸಾರಲು ಈ ಸಾಹಸ ಯೋಗಾಸನ ಮಾಡಿದರು. ಭಾರತದ ವಿವಿಧೆಡೆ ವಿಭಿನ್ನ ರೀತಿಯಲ್ಲಿ ಯೋಗ ದಿನ ಆಚರಿಸಲಾಗಿದೆ.

DgIxR7SWsAIPBPI

ಭೂಮಿ, ಜಲದಲ್ಲೂ ಯೋಗಾಯೋಗ :
ಭಾರತೀಯ ಸಶಸ್ತ್ರ ಪಡೆಗಳು ಅತ್ಯಂತ ದುರ್ಗಮ ಸ್ಥಳಗಳಲ್ಲಿ ಇಂದು ಯೋಗಾಸನ ಮಾಡುವ ಮೂಲಕ ಯೋಗ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು. ವಿಶ್ವದ ಅತ್ಯಂತ ಎತ್ತರದ ಸಮರ ಭೂಮಿ ಸಿಯಾಚಿನ್, ಕಾರ್ಗಿಲ್, ಹಿಮಚ್ಚಾದಿತ ಗಡಿ ಪ್ರದೇಶಗಳು, ಗುಡ್ಡಗಾಡು ಸ್ಥಳಗಳು, ಮರುಭೂಮಿ ಸೇರಿದಂತೆ ಎಲ್ಲೆಡೆ ವಿವಿಧ ತುಕಡಿಗಳ ಯೋಧರು ಯೋಗಾಸನ ಮಾಡಿ ಸ್ಫೂರ್ತಿಗೆ ಪ್ರೇರಣೆ ನೀಡಿದರು.  ಭಾರತೀಯ ನೌಕಾದಳದ ಯೋಧರು, ಸಮುದ್ರದಲ್ಲಿ ತೆರೆಳುತ್ತಿದ್ದ ಸಮಯ ನೌಕೆಯಲ್ಲಿ ಹಾಗೂ ನೀರಿನಲ್ಲಿ ಸಾಮೂಹಿಕ ಯೋಗಾಭ್ಯಾಸ ಮಾಡಿದರು.

DgL2qmfV4AEWwqP

DgLfCVrUcAA3NPj

DgL6qNSXkAAoSyI

Facebook Comments

Sri Raghav

Admin