ಬಾಬಾ ರಾಮ್ದೇವ್ ನೇತೃತ್ವದಲ್ಲಿ 1 ಲಕ್ಷ ಜನರಿಂದ ವಿಶ್ವ ದಾಖಲೆ ಯೋಗಾಭ್ಯಾಸ
ಕೋಟಾ, ಜೂ.21-ನಾಲ್ಕನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ರಾಜಸ್ಥಾನ ಇದು ವಿಶ್ವ ದಾಖಲೆಗೆ ಸಾಕ್ಷಿಯಾಯಿತು. ಯೋಗ ಗುರು ಬಾಬಾ ರಾಮ್ದೇವ್ ನೇತೃತ್ವದಲ್ಲಿ ಕೋಟಾದಲ್ಲಿ ನಡೆದ ಬೃಹತ್ ಯೋಗ ಅಧಿವೇಶನದಲ್ಲಿ 1.05 ಲಕ್ಷಕ್ಕೂ ಅಧಿಕ ಮಂದಿ ಸಾಮೂಹಿಕವಾಗಿ ಯೋಗಾಸನ ಮಾಡಿ ಗಿನ್ನಿಸ್ ವಿಶ್ವ ದಾಖಲೆ ನಿರ್ಮಿಸಿದರು. ಆರ್ಎಸಿ ಮೈದಾನದಲ್ಲಿ ನಡೆದ ಈ ಬೃಹತ್ ಯೋಗ ಕಾರ್ಯಕ್ರಮದಲ್ಲಿ ರಾಜಸ್ತಾನ ಮುಖ್ಯಮಂತ್ರಿ ವಸುಂಧರಾ ರಾಜೆ, ಸಂಪುಟ ಸಚಿವರು, ಶಾಸಕರು, ಅಧಿಕಾರಿಗಳು, 4500 ತರಬೇತಿದಾರರು ಹಾಗೂ ಸ್ಥಳೀಯ ಜನರು ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ಹಾಜರಿದ್ದ ಗಿನ್ನಿಸ್ ವಲ್ರ್ಡ್ ರೆಕಾರ್ಡ್ ನೋಂದಣಿ ಅಧಿಕಾರಿಗಳು ಯೋಗ ಅಧಿವೇಶನದ ನಂತರ ವಿಶ್ವ ದಾಖಲೆ ನಿರ್ಮಾಣವಾಗಿರುವುದನ್ನು ಘೋಷಿಸಿ ಪ್ರಮಾಣ ಪತ್ರ ನೀಡಿದರು. ರಾಜಸ್ಥಾನ ಸರ್ಕಾರ, ಪತಂಜಲಿ ಯೋಗಪೀಠ ಮತ್ತು ಕೋಟಾ ಜಿಲ್ಲಾಡಳಿತ ಇವುಗಳ ಸಂಯುಕ್ತಾಶ್ರಯದಲ್ಲಿ ಈ ಬೃಹತ್ ಯೋಗ ಕಾರ್ಯಕ್ರಮ ಆಯೋಜಿಸಲಾಗಿತ್ತು.
Facebook Comments