‘ಕೆಲವು ದಿನಗಳ ನಂತರ’ ಸಿನಿಮಾ ಈ ವಾರವೇ ತೆರೆಗೆ ಬರುತ್ತಿದೆ
ಸ್ಯಾಂಡಲ್ವುಡ್ನಲ್ಲಿ ಈ ವಾರ ಮತ್ತೊಂದು ಹಾರರ್ ಚಿತ್ರ ರಿಲೀಸಾಗುತ್ತಿದೆ. ನಟಿ ಶುಭಾ ಪುಂಜಾ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಕೆಲವು ದಿನಗಳ ನಂತರ ಎಂಬ ಹೆಸರಿನ ಈ ಚಿತ್ರದ ಬಿಡುಗಡೆ ಪೂರ್ವ ಪತ್ರಿಕಾಗೋಷ್ಠಿ ಮೊನ್ನೆ ನಡೆಯಿತು. ಇದೇ ಮೊದಲಬಾರಿಗೆ ನಿರ್ದೇಶನ ಮಾಡಿರುವ ಶ್ರೀನಿ ಅವರು ಚಿತ್ರದ ವಿಶೇಷತೆಗಳ ಬಗ್ಗೆ ಮಾತನಾಡುತ್ತ ಈ ಚಿತ್ರದಲ್ಲಿ ಭಯಪಡಿಸುವ ಶಬ್ದ, ಹಾರರ್ ಅಂಶಗಳು ಇರುವುದರಿಂದ ನೋಡುಗರಿಗೆ ಜೀವ ಜಲ್ ಅನಿಸುತ್ತದೆ. ಅದಕ್ಕಾಗಿಯೇ ಗರ್ಭಿಣಿಯರು ಮತ್ತು ಹೃದಯಘಾತದ ತೊಂದರೆ ಇರುವವರಿಗೆ ಪ್ರವೇಶವನ್ನು ನಿಷೇಧಿಸಿದೆ.
ಭಯಾನಕ ಅಂಶಗಳು ಇರುವುದರಿಂದ ಸೆನ್ಸಾರ್ನವರು ಯಾವುದೇ ದೃಶ್ಯಕ್ಕೆ ಕಟ್ ಹೇಳದೆ ಎ ಪ್ರಮಾಣಪತ್ರ ನೀಡಿದ್ದಾರೆ. ನಮ್ಮ ಚಿತ್ರದ ಕಥೆಯಲ್ಲಿ ಭಯದ ಜೊತೆಗೆ ಹಾಸ್ಯ ಕೂಡ ಇದೆ. ಸಿನಿಮಾದ ಕೊನೆಯ ಹತ್ತು ನಿಮಿಷದಲ್ಲಿ ಆರಂಭದಿಂದ ಮೂಡಿದ ಎಲ್ಲಾ ಪ್ರಶ್ನೆಗಳಿಗೆ ಸೂಕ್ತ ಉತ್ತರ ಸಿಗುತ್ತದೆ. ಏನು, ಯಾಕೆ, ಹೇಗೆ ಎನ್ನುವುದು ತೆರೆದುಕೊಳ್ಳುತ್ತದೆ ಎಂದು ನಿರ್ದೇಶಕ ಶ್ರೀನಿ ಹೇಳಿದರು. ಈ ಚಿತ್ರದಲ್ಲಿ ನಾಯಕಿಯಾಗಿ ಶುಭಾ ಪೂಂಜಾ ಅವರು ಕಾಣಿಸಿಕೊಂಡಿದ್ದಾರೆ. ಚಿತ್ರದ ಬಗ್ಗೆ ಮಾತನಾಡಿದ ಅವರು ಐವರು ಟೆಕ್ಕಿಗಳು ದೂರದ ಸ್ಥಳಕ್ಕೆ ಪ್ರಯಾಣ ಮಾಡುತ್ತಾರೆ. ಅಲ್ಲಿ ಅರಿಯದೆ ನಡೆಯುವ ತಪ್ಪುಗಳು ಅನಾಹುತಕ್ಕೆ ಕಾರಣವಾಗುತ್ತದೆ. ಇದು ಜಗತ್ತಿನ ಎಲ್ಲಾ ಕಡೆ ನಡೆಯುತ್ತಿದ್ದು, 2016ರ ನೈಜ ಘಟನೆಗೆ ಚಿತ್ರರೂಪ ಕೂಡಲಾಗಿದೆ ಎಂದು ಕಥೆಯ ತಿರುಳನ್ನು ಬಿಟ್ಟುಕೊಟ್ಟರು.
ನಾಯಕಿಯಾಗಿ ಕಾಣಿಸಿಕೊಂಡಿರುವ ನಟಿ ದ್ರವ್ಯಾ ಶೆಟ್ಟಿ ಮಾತನಾಡಿ, ಈಗಿನ ಕಾಲದಲ್ಲಿ ಮೊಬೈಲನಿಂದ ಉಪಯೋಗಕ್ಕಿಂತ ಹೆಚ್ಚಾಗಿ ಸಾಕಷ್ಟು ದುರಪಯೋಗವೇ ಆಗುತ್ತಿದೆ ಅನ್ನೋ ಅಂಶವನ್ನು ಚಿತ್ರದಲ್ಲಿ ಹೇಳಲಾಗಿದೆ. ಹಾರರ್ ಚಿತ್ರದಲ್ಲೂ ಯುವಜನತೆಗೊಂದು ಅರ್ಥಪೂರ್ಣ ಸಂದೇಶವಿರುವುದು ಪ್ಲಸ್ ಪಾಯಿಂಟ್ ಆಗಿದೆ ಎಂದು ಹೇಳಿದರು.
ಉತ್ತರ ಕರ್ನಾಟಕದ ಪ್ರತಿಭೆ ಸೋನು ಪಾಟೀಲ್ ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇವರೊಂದಿಗೆ ಜಗದೀಶ್, ಕಾಮಿಡಿ ಕಿಲಾಡಿಗಳು ಖ್ಯಾತಿಯ ಲೋಕೇಶ್ ಮುಂತಾದವರ ಅಭಿನಯವಿದೆ. ಅಲ್ಲದೆ ಚಿತ್ರದಲ್ಲಿ ಬರುವ 6 ತಿಂಗಳ ಮಗುವನ್ನು ಕಂಪ್ಯೂಟರ್ ಗ್ರಾಫಿಕ್ಸ್ ಮೂಲಕ 3ಡಿಯಲ್ಲಿ ರೂಪಿಸಲಾಗಿದೆ. ಮುತ್ತುರಾಜ. ಹೆಚ್.ಪಿ., ವಸಂತ್ಕುಮಾರ್ ಬಿ.ಎಂ. ಹಾಗೂ ಚಂದ್ರಕುಮಾರ್.ಟಿ.ಸಿ. ಅವರ ನಿರ್ಮಾಣ ದಲ್ಲಿ ಮೂಡಿಬಂದಿರುವ ಈ ಚಿತ್ರವು ಇದೇ ಶುಕ್ರವಾರದಂದು ರಾಜಾ ್ಯದ್ಯಂತ ಸುಮಾರು 60 ಕ್ಕೂ ಹಚ್ಚು ಚಿತ್ರಮಂದಿರಗಳಲ್ಲಿ ಸದ್ದು ಮಾಡಲು ಬರುತ್ತಿದೆ.