ಬಿಜೆಪಿ ಮುಖಂಡನ ಮನೆ ಮೇಲೆ ದಾಳಿ, 40 ಕೋಟಿ ಮೌಲ್ಯದ ಡ್ರಗ್ಸ್ ವಶ

ಈ ಸುದ್ದಿಯನ್ನು ಶೇರ್ ಮಾಡಿ

Drugs

ಇಂಫಾಲ(ಮಣಿಪುರ), ಜೂ. 21 – ಕಳೆದ ರಾತ್ರಿ ಮಣಿಪುರದ ಚಂಡೇಲಾ ಜಿಲ್ಲೆಯ ಬಿಜೆಪಿ ಮುಖಂಡ ಹಾಗೂ ಸ್ವಾಯತ್ತ ಜಿಲ್ಲಾ ಸಮಿತಿ ಅಧ್ಯಕ್ಷ ( ಎಡಿಸಿ) ಲುಂಕೋಸೈ ಜೋ ನಿವಾಸದ ಮೇಲೆ ದಾಳಿ ನಡೆಸಿ 40 ಕೋಟಿ ಮೌಲ್ಯದ ಮಾದಕ ವಸ್ತು ( ಡ್ರಗ್ಸ್ ) ಅನ್ನು ವಶಪಡಿಸಿಕೊಂಡಿದ್ದಾರೆ.  ಮಾದಕ ವಸ್ತು ಹಾಗೂ ಗಡಿ ನಿಯಂತ್ರಣ (ಎನ್‍ಎಬಿ)ದ ಪೊಲೀಸ್ ವರಿಷ್ಠ ಡಬ್ಲ್ಯು.ಬಸುಸಿಂಗ್ ನೇತೃತ್ವದಲ್ಲಿ ಈ ದಾಳಿ ನಡೆದಿದ್ದು, ಲುಂಕೋಸೈ ಜೋ ಅವರ ನಿವಾಸದಲ್ಲಿ 4 ಕೆಜಿ ತೂಕದ ಹೆರಾನ್ ಹಾಗೂ 2,80,000 ಮಾದಕ ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪೊಲೀಸರು ವಶಪಡಿಸಿಕೊಂಡಿರುವ ಮಾಲುಗಳ ಮೌಲ್ಯ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ 40 ಕೋಟಿ ಆಗಲಿದ್ದು , ದಾಳಿಯ ವೇಳೆ 13 ಲಕ್ಷ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬಸುಸಿಂಗ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಮ್ಯಾನ್ಮಾರ್ ಗಡಿಯ ಸಮೀಪವಿರುವ ಮೊರೈಯೆ ಪ್ರಾಂತ್ಯದ ಸ್ವಾಯತ್ತ ಜಿಲ್ಲಾ ಸಮಿತಿ ಅಧ್ಯಕ್ಷ ಹಾಗೂ ಬಿಜೆಪಿ ಮುಖಂಡರೂ ಆಗಿರುವ ಲುಂಕೋಸೈ ನಿವಾಸದಲ್ಲಿ ದೊಡ್ಡ ಮಟ್ಟದ ಸಮಾರಂಭ ಹಮ್ಮಿಕೊಂಡಿದ್ದು ಇದರ ಅಂಗವಾಗಿಯೇ ಈ ಭಾರಿ ಪಾರ್ಟಿ ಡ್ರಗ್ಸ್ ಮತ್ತು ಮಾದಕ ವಸ್ತುಗಳನ್ನು ಸಂಗ್ರಹಿಸಿಡಲಾಗಿತ್ತು ಎಂದು ಹೇಳಿದ್ದಾರೆ. ಪ್ರಕರಣದ ಸಂಬಂಧ ಲುಂಕೋಸೈ ಸೇರಿದಂತೆ ಎಂಟು ಮಂದಿಯನ್ನು ಬಂಧಿಸಲಾಗಿದೆ ಎಂದು ಬಸುಸಿಂಗ್ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.

Facebook Comments

Sri Raghav

Admin