ಬಿಜಿಎಸ್‍ ಆಸ್ಪತ್ರೆಯಲ್ಲಿ ಸಿದ್ಧಗಂಗಾಶ್ರೀಗಳ ಆರೋಗ್ಯ ತಪಾಸಣೆ

ಈ ಸುದ್ದಿಯನ್ನು ಶೇರ್ ಮಾಡಿ

Siddaganga-Shree--01
ತುಮಕೂರು, ಜೂ.21-ನಡೆದಾಡುವ ದೇವರು, ತ್ರಿವಿಧ ದಾಸೋಹಿ ತುಮಕೂರಿನ ಸಿದ್ಧಗಂಗಾ ಮಠಾಧೀಶರಾದ ಡಾ.ಶ್ರೀ ಶಿವಕುಮಾರಸ್ವಾಮೀಜಿಯವರನ್ನು ಅನಾರೋಗ್ಯದ ಹಿನ್ನೆಲೆಯಲ್ಲಿ ತಪಾಸಣೆಗಾಗಿ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ಕರೆತರಲಾಗಿದೆ. ಶ್ರೀಗಳ ಆರೋಗ್ಯದಲ್ಲಿ ಗಂಭೀರ ಸಮಸ್ಯೆ ಏನೂ ಇಲ್ಲ, ಸಾಮಾನ್ಯವಾದ ಜ್ವರ, ಶೀತ, ಕೆಮ್ಮು ಇರುವುದರಿಂದ ಆಸ್ಪತ್ರೆಗೆ ಕರೆತರಲಾಗಿದೆ ಎಂದು ವೈದ್ಯರಾದ ಡಾ.ಪರಮೇಶ್ವರ್ ಅವರು ತಿಳಿಸಿದ್ದಾರೆ.

ಶತಾಯುಷಿಗಳಾದ ಸಿದ್ದಗಂಗಾ ಶ್ರೀಗಳಿಗೆ ಈಗಾಗಲೇ ಆರು ಸ್ಟಂಟ್‍ಗಳನ್ನು ಅಳವಡಿಸಲಾಗಿದೆ. ಕಳೆದ ಬಾರಿ ಅಳವಡಿಸಿದ್ದ ಸ್ಟಂಟ್ ಪರೀಕ್ಷಿಸಬೇಕಾಗಿದೆ. ಇನ್‍ಫೆಕ್ಷನ್ ಏನೂ ಆಗಿಲ್ಲ. ಶ್ರೀಗಳಿಗೆ ಅಳವಡಿಸಿರುವ ಸ್ಟಂಟ್ 3 ರಿಂದ 4 ತಿಂಗಳಷ್ಟೇ ಇರುವುದು. ಆಮೇಲೆ ಅದು ಬ್ಲಾಕ್ ಆಗುತ್ತದೆ. ಎಂಡೋಸ್ಕೋಪಿ ಮೂಲಕ ಪರೀಕ್ಷೆ ನಡೆಸಬೇಕಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.

ಆರೋಗ್ಯದಲ್ಲಿ ಅಂತಹ ಏರುಪೇರು ಏನು ಕಂಡುಬಂದಿಲ್ಲ. ಯಾವುದಕ್ಕೂ ಒಂದು ಬಾರಿ ತಪಾಸಣೆ ನಡೆಸಿದರೆ ಒಳ್ಳೆಯದು ಎಂಬ ಉದ್ದೇಶದಿಂದ ಇಲ್ಲಿನ ಆಸ್ಪತ್ರೆಗೆ ಕರೆತರಲಾಗಿದೆ ಎಂದು ಅವರ ಆಪ್ತ ವೈದ್ಯರು ಈ ಸಂಜೆಗೆ ತಿಳಿಸಿದ್ದಾರೆ.

Facebook Comments

Sri Raghav

Admin