ಯೋಗ ಮಾಡುತ್ತಿದ್ದಾಗಲೇ ಹೃದಯಘಾತದಿಂದ ಸಾವನ್ನಪ್ಪಿದ ಶಿಕ್ಷಕ..!

ಈ ಸುದ್ದಿಯನ್ನು ಶೇರ್ ಮಾಡಿ

Teacher--01

ಬಾಗಲಕೋಟೆ, ಜೂ.21- ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಇಂದು ಶಾಲೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಯೋಗ ಮಾಡುತ್ತಿದ್ದ ಶಿಕ್ಷಕರೊಬ್ಬರು ಹೃದಯಘಾತದಿಂದ ಸಾವನ್ನಪ್ಪಿದ್ದಾರೆ. ನಗರದ ರಬ ಕವಿ ಬನಹಟ್ಟಿ ತಾಲ್ಲೂಕಿನ ನಿವಾಸಿ ವಿಶ್ವನಾಥ್ ಬಿರಾದಾರ್(50) ಮೃತಪಟ್ಟ ಶಿಕ್ಷಕ.   ಎಸ್‍ಜೆ ಹೆಣ್ಣುಮಕ್ಕಳ ಪ್ರೌಢಶಾಲೆಯಲ್ಲಿ ಗಣಿತ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು, ಇಂದು ನಾಲ್ಕನೇ ಅಂತಾರಾಷ್ಟ್ರೀಯ ವಿಶ್ವ ಯೋಗ ದಿನಾಚರಣೆ ಅಂಗವಾಗಿ ತೇರದಾಳ ಗುರುಕುಲ ಕ್ಯಾಂಪಸ್‍ನಲ್ಲಿ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದರು. ಯೋಗ ಮಾಡುವಾಗ ಶಿಕ್ಷಕರಿಗೆ ತೀವ್ರ ಹೃದಯಘಾತವಾಗಿದ್ದು , ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

Facebook Comments

Sri Raghav

Admin