ಜೆ.ಹೆಚ್ ಪಟೇಲ್ ಪ್ರಶಸ್ತಿಗೆ ಚಂದ್ರಶೇಖರ ಕಂಬಾರ ಆಯ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

Chandrashekhar-Kambar

ಬೆಂಗಳೂರು. ಜೂ.22- ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರು, ಜ್ಞಾನಪೀಠ ಪುರಸ್ಕøತ ಸಾಹಿತಿ ಪದ್ಮಶ್ರೀ ಡಾ. ಚಂದ್ರಶೇಖರ ಕಂಬಾರ ಅವರನ್ನು ವಿ.ಸೋಮಣ್ಣ ಪ್ರತಿಷ್ಠಾನ ನೀಡುವ 2018 ಜೆ.ಹೆಚ್ ಪಟೇಲ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ಸಮಾಜವಾದಿ ಚಿಂತಕ, ರಾಜಕೀಯ ಮುತ್ಸದ್ಧಿ ಜೆ.ಹೆಚ್ ಪಟೇಲ್ ಅವರ ಹೆಸರಿನಲ್ಲಿ ಪ್ರಶಸ್ತಿ ಸ್ಥಾಪಿಸಲಾಗಿತ್ತು ಪ್ರತಿ ವರ್ಷವು ನಾಡಿನ ಸಾಧಕರೊಬ್ಬರಿಗೆ ಜೆ.ಹೆಚ್.ಪಟೇಲ್ ಪ್ರಶಸ್ತಿ  ಪ್ರದಾನ ಮಾಡಲಾಗುತ್ತಿದ್ದು, ಪ್ರಶಸ್ತಿಯ ಮೊತ್ತ 50,000 ರೂ. ಪ್ರಶಸ್ತಿ ಫಲಕ ಮತ್ತು ನೆನಪಿನ ಕಾಣಿಕೆ ಒಳಗೊಂಡಿದೆ. ಜುಲೈ 2ನೇ ವಾರದಲ್ಲಿ ಶ್ರೀವಿ. ಸೋಮಣ್ಣ ಪ್ರತಿಷ್ಠಾನದ ವತಿಯಿಂದ ನಡೆಯಲಿರುವ ಬಸವ ಜಯಂತಿ ಸಮಾರಂಭದಲ್ಲಿ ಜೆ.ಹೆಚ್ ಪಟೇಲ್‍ಪ್ರಶಸ್ತಿಯನ್ನು ಡಾ. ಚಂದ್ರಶೇಖರ ಕಂಬಾರ ಅವರಿಗೆ ಪ್ರದಾನ ಮಾಡಲಾಗುವುದು.

ಡಾ. ಚಂದ್ರಶೇಖರ ಕಂಬಾರ ಅವರು ಸಾಹಿತ್ಯ, ಸಿನಿಮಾ, ರಂಗಭೂಮಿ, ಸಂಗೀತ, ಜಾನಪದ ಅಧ್ಯಾಪನ ಜೊತೆಗೆ ಕನ್ನಡ ವಿಶ್ವ ವಿದ್ಯಾಲಯದ ಪ್ರಪ್ರಥಮ ಕುಲ ಪತಿಗಳಾಗಿ, ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾಗಿ , ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ಕೇಂದ್ರ ಸಾಹಿತಾ ಅಕಾಡೆಮ ಅಧ್ಯಕ್ಷರಾಗಿದ್ದಾರೆ. ರಾಷ್ಟ್ರೀಯ ಅತ್ಯುನ್ನತ ಪುರಸ್ಕಾರವಾದ ಜ್ಞಾನಪೀಠ ಪ್ರಶಸ್ತಿ ಸೇರಿದಂತ ಕೇಂದ್ರ ಪದ್ಮಶ್ರೀ, ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ, ಮಧ್ಯಪ್ರದೇಶದ ಕಾಳಿದಾಸ ಪ್ರಶಸ್ತಿ, ಕೇರಳ ರಾಜ್ಯದ ಕುಮಾರ ಆಶನ್ ಪ್ರಶಸ್ತಿ ಅಲ್ಲದೆ ಕರ್ನಾಟಕ ಸಾಹಿತಿ, ಸಂಗೀತ, ಜಾನಪದ ನಾಟಕ ಅಕಾಡೆಮಿಗಳ ಪುರಸ್ಕಾರಗಳು ಸೇರಿದಂತೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಜನರಾಗಿದ್ದಾರೆ.

Facebook Comments

Sri Raghav

Admin