ನ್ಯೂಯಾರ್ಕ್‍ನಲ್ಲಿ ಪ್ರಕೃತಿ ಚಿಕಿತ್ಸೆ ಕೇಂದ್ರ ಉದ್ಘಾಟಿಸಿದ ಪ್ರಧಾನಿ ಮೋದಿ

ಈ ಸುದ್ದಿಯನ್ನು ಶೇರ್ ಮಾಡಿ

Modi--01
ವಿಶ್ವಸಂಸ್ಥೆ, ಜೂ.22-ಯೋಗ ಯಾವುದೇ ಧರ್ಮಕ್ಕೆ ಸೀಮಿತವಾಗಿಲ್ಲ ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ ಯೋಗವು ವಿಶ್ವವನ್ನು ಬೆಸೆಯುವ ಶಕ್ತಿಯಾಗಲಿದೆ ಎಂಬ ಆಶಾಭಾವನೆ ವ್ಯಕ್ತಪಡಿಸಿದ್ಧಾರೆ. ನ್ಯೂಯಾರ್ಕ್‍ನ ಕ್ಯಾಟ್‍ಕಿಲ್ಸ್ ಪ್ರದೇಶದಲ್ಲಿ ವೈಓ1 ಲಕ್ಷುರಿ ನೇಚರ್ ಕ್ಯೂರ್ ಸೆಂಟರ್‍ನನ್ನು ವಿಡಿಯೋ-ಲಿಂಕ್ ಮೂಲಕ ಅವರು ಉದ್ಘಾಟಿಸಿದರು.

ಯೋಗಕ್ಕೆ ಯಾವುದೇ ಧರ್ಮದ ಕಟ್ಟುಪಾಡು ಇಲ್ಲ. ಯೋಗ ಎಂದರೆ ಏಕತೆ. ಆದ್ದರಿಂದ ಯೋಗದಲ್ಲಿನ ಈ ಆಸಕ್ತಿಕರ ವಿಷಯವು ನನ್ನಲ್ಲಿ ಭರವಸೆ ತುಂಬಿದೆ. ಇದು ವಿಶ್ವವನ್ನು ಬೆಸೆಯುವ ಮಹಾ ಶಕ್ತಿಯಾಗಲಿದೆ ಎಂದು ನಾನು ಭರವಸೆ ಹೊಂದುತ್ತೇನೆ ಎಂದು ಅವರು ಉದಾಟನಾ ಭಾಷಣದಲ್ಲಿ ಹೇಳಿದರು.
ನ್ಯೂಯಾರ್ಕ್‍ನಲ್ಲಿ ಪ್ರಕೃತಿ ಚಿಕಿತ್ಸಾ ಕೇಂದ್ರವು ರಾಜ್ಯಸಭಾ ಸದಸ್ಯ ಮತ್ತು ಎಸ್ಸೆಲ್ ಗ್ರೂಪ್ ಅಧ್ಯಕ್ಷ ಸುಭಾಷ್ ಚಂದ್ರ ಅವರ ಕನಸಿನ ಕೂಸು. ಅವರ ಶ್ರಮದ ಫಲವಾಗಿ ಈ ಕೇಂದ್ರ ಸ್ಥಾಪನೆಯಾಗಿದೆ ಎಂದು ಮೋದಿ ತಿಳಿಸಿದರು.

Facebook Comments

Sri Raghav

Admin