ಅಳಿವಿನಂಚಿನ ಅಪರೂಪದ ಕರಡಿ ಮರಿ ಜನನಕ್ಕೆ ಪೋಲೆಂಡ್ ಜನ ಪುಲ್ ಖುಷ್..!

ಈ ಸುದ್ದಿಯನ್ನು ಶೇರ್ ಮಾಡಿ

d-s

ಅಪಾಯದ ಅಂಚಿನಲ್ಲಿರುವ ಪ್ರಾಣಿಗಳ ಸಂತತಿ ವೃದ್ದಿಯಾದರೆ ಪರಿಸರವಾದಿಗಳು ಮತ್ತು ಪ್ರಾಣಿಪ್ರಿಯರಿಗೆ ಸಂತಸದ ಸಂಗತಿ ಅಲ್ಲವೇ..? ಪೋಲೆಂಡ್ ಮೃಗಾಲಯವೊಂದರಲ್ಲಿ ಅಪರೂಪದ ಕರಡಿ ಮರಿಯೊಂದು ಜನಿಸಿರು ವುದು ಖುಷಿ ನೀಡಿದೆ.  ಪೋಲೆಂಡ್‍ನ ವ್ರೋಕ್ಲಾವ್ ಮೃಗಾಲಯಕ್ಕೆ ಅತ್ಯಂತ ಅಪರೂಪದ ಅತಿಥಿಯ ಆಗಮನವಾಗಿದೆ. ಮಾರ್ಸುಪಿಯಲ್ ಜಾತಿಯ ಕರಡಿ ಮರಿ ಜನಿಸಿರುವುದು ಮೃಗಾಲಯದ ಸಿಬ್ಬಂದಿ ಸಂತಸಕ್ಕೆ ಕಾರಣವಾಗಿವೆ. ಈ ಮರಿಯ ಹೆಸರು ಕುಸ್‍ಕುಸ್.

d-s-1

ಮಾರ್ಸುಪಿಯಲ್-ಇದು ಹೊಟ್ಟೆ ಚೀಲದ ಜಾತಿಯ ಪ್ರಾಣಿ. ಮರಿಯನ್ನು ಹೊಟ್ಟೆಯ ಚೀಲದಲ್ಲಿಟ್ಟುಕೊಂಡು ಇದು ತಿರುಗಾಡುತ್ತದೆ. ಕಾಂಗೂರುವಿನಂಥ ಸಸ್ತನಿ ಗಳನ್ನು ಒಳಗೊಂಡ ಮಾರ್ಸೂಪಿಯೇಲಿಯಾ ಗಣದ ಜೀವಿ ಇದು. ಬೂದು ಮತ್ತು ಕಪ್ಪು ಮಿಶ್ರಿತ ತುಪ್ಪಳ, ಉದ್ದ ಬಾಲ ಹೊಂದಿರುವ ಈ ಜಾತಿಯ ಕರಡಿ ಸಂಖ್ಯೆ ಆತಂಕಕಾರಿ ಮಟ್ಟದಲ್ಲಿ ಕ್ಷೀಣಿಸಿದೆ. ವಿಶ್ವದ ನಾಲ್ಕು ಮೃಗಾಲಯ ಗಳಲ್ಲಿ ಈ ಜಾತಿಯ ಕರಡಿಗಳ ಸಂಖ್ಯೆ ಕೇವಲ 13ರಷ್ಟಿದೆ.  ಎಲೆಗಳನ್ನು ತಿನ್ನುವ ಈ ಜಾತಿಯ ಕರಡಿಗಳ ಮೂಲ ಇಂಡೋನೆಷ್ಯಾದ ಸುಲಾವೇಸಿ ದ್ವೀಪ. ಈ ಪ್ರಾಣಿಯನ್ನು ಅತ್ಯಂತ ಅಪಾಯದಲ್ಲಿ ರುವ ಪಟ್ಟಿಗೆ ಸೇರಿಸ ಲಾಗಿದೆ. ಅರಣ್ಯ ನಾಶ ಮತ್ತು ಬೇಟೆಯಿಂದಾಗಿ ಇವುಗಳ ಸಂತತಿ ಅವಸಾನದ ಅಂಚಿನಲ್ಲಿದೆ.  ವೋಕ್ಲಾವ್ ಮೃಗಾಲಯದಲ್ಲಿ ಕಳೆದ ಮೂರು ವರ್ಷಗಳಿಂದ ಇರುವ ಗಂಡು ಮತ್ತು ಹೆಣ್ಣು ಕರಡಿಗೆ ಈ ಮರಿ ಜನಿಸಿದೆ.

Facebook Comments

Sri Raghav

Admin