ಇಂದು 18 ಪೈಸೆ ಸೇರಿ 22 ದಿನಗಳಿಂದ 2.41 ರೂ ನಷ್ಟು ಇಳಿದ ಪೆಟ್ರೋಲ್ ಬೆಲೆ

ಈ ಸುದ್ದಿಯನ್ನು ಶೇರ್ ಮಾಡಿ

petrol-price-down
ನವದೆಹಲಿ, ಜೂ.22- ಜೂನ್ ಮೊದಲ ದಿನದಿಂದಲೂ ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಇಳಿಮುಖವಾಗಿದ್ದು ಇಂದು ಕೂಡ ಪೆಟ್ರೋಲ್ ದರದಲ್ಲಿ 14 ರಿಂದ 18 ಪೈಸೆ ಕಡಿಮೆಯಾಗಿದ್ದರೆ, ಡೀಸೆಲ್ ಬೆಲೆ ಯಥಾಸ್ಥಿತಿ ಇದೆ ಎಂದು ಭಾರತೀಯ ಪೆಟ್ರೋಲಿಯಂ ಮಂಡಳಿ (ಐಒಸಿ) ತಿಳಿಸಿದೆ. ರಾಜಧಾನಿ ನವದೆಹಲಿಯಲ್ಲಿ ಕಳೆದ 22 ದಿನಗಳಿಂದ ಲೀಟರ್‍ಗೆ 2.41 ರೂಪಾಯಿಗಳಷ್ಟು ದರ ಇಳಿಮುಖವಾಗಿದ್ದಿರೆ, ವಾಣಿಜ್ಯ ನಗರಿ ಮುಂಬೈನಲ್ಲಿ 2.5 ರೂಪಾಯಗಳಷ್ಟು ಇಳಿಮುಖವಾಗಿದೆ.  ಇಂದು ಮತ್ತೆ ಪೆಟ್ರೋಲ್ ಬೆಲೆ ಕಡಿತಗೊಂಡಿದ್ದು ನವದೆಹಲಿಯಲ್ಲಿ 14 ಪೈಸೆ ಹಾಗೂ ಮಂಬೈನಲ್ಲಿ 18 ಪೈಸೆ ಕಡಿತಗೊಂಡಿದೆ ಎಂದು ಭಾರತೀಯ ಪೆಟ್ರೋಲಿಯಂ ಕಾರ್ಪೋರೇಷನ್ ಕಂಪನಿ ತಿಳಿಸಿದೆ.

Facebook Comments