ದೊಡ್ಡ ಬ್ಯುಸಿನೆಸ್’ಗೆ ಕೈಹಾಕೋ ಮುನ್ನ ಈ ಕುಟುಂಬದ ದುರಂತ ಕಥೆಯನ್ನೊಮ್ಮೆ ಓದಿ

ಈ ಸುದ್ದಿಯನ್ನು ಶೇರ್ ಮಾಡಿ

Firing-Family

ಬೆಂಗಳೂರು, ಜೂ.23- ವ್ಯಾಪಾರ, ವ್ಯವಹಾರ, ಉದ್ಯಮ ಪ್ರಾರಂಭಿಸುವುದಕ್ಕೆ ಮುಂಚೆ ಸರಿಯಾದ ಯೋಜನೆ ಮಾಡಿಕೊಳ್ಳದಿದ್ದರೆ ಅದರಿಂದಾಗುವ ನಷ್ಟದ ಪರಿಣಾಮ ಏನಾಗುತ್ತದೆ ಎಂಬುದಕ್ಕೆ ಜಯನಗರದ ನಿವಾಸಿ, ರಿಯಲ್ ಎಸ್ಟೇಟ್ ಉದ್ಯಮಿ ಗಣೇಶ್ ಅವರೇ ಉದಾಹರಣೆ.   ಮೂಲತಃ ಹಾಸನ ಜಿಲ್ಲೆ ಸಕಲೇಶಪುರ ನಿವಾಸಿಯಾದ ಸ್ಟ್ರಕ್ಚರಲ್ ಎಂಜಿನಿಯರ್ ಪದವೀಧರರಾಗಿರುವ ಗಣೇಶ್ ಅವರು ಪಿಟೀಲು ವಾದಕರು. ಐಷಾರಾಮಿ ಜೀವನದ ಕನಸು ಕಂಡಿದ್ದ ಗಣೇಶ್ ರೆಸಾರ್ಟ್ ಉದ್ಯಮ, ರಿಯಲ್ ಎಸ್ಟೇಟ್ ಆರಂಭಿಸಬೇಕೆಂದು ಯೋಚಿಸಿ ತನ್ನ ಪೂರ್ವಾರ್ಜಿತ ಆಸ್ತಿ ಕಾಫಿ ತೋಟಗಳನ್ನು ಮಾರಿ ಬೆಂಗಳೂರಿನ ಜಯನಗರದಲ್ಲಿ ಮನೆ ಮತ್ತು ಕಗ್ಗಲಿಪುರದ ನೆಟ್ಟಿಗೆರೆ ಬಳಿ ರೆಸಾರ್ಟ್ ಮಾಡಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದರು.

Family--01

ನೋಟ್‍ಬ್ಯಾನ್ ಬಳಿಕ ರಿಯಲ್ ಎಸ್ಟೇಟ್ ಉದ್ಯಮ ಬಿದ್ದು ಹೋಗಿ ವ್ಯವಹಾರ ಸಹ ಕುಂಠಿತವಾಗಿತ್ತು. ಅಲ್ಲದೆ, ರೆಸಾರ್ಟ್‍ನಿಂದಲೂ ಎರಡು ವರ್ಷದಿಂದ ನಷ್ಟ ಉಂಟಾಗಿ ಗಣೇಶ್ ಅವರು ಲಕ್ಷಾಂತರ ರೂ. ಸಾಲ ಮಾಡಿಕೊಂಡಿದ್ದರು.ರಿಯಲ್ ಎಸ್ಟೇಟ್ ಉದ್ಯಮ ಹಾಗೂ ರೆಸಾರ್ಟ್ ನಷ್ಟ ನಿಭಾಯಿಸಲು ಸಾಧ್ಯವಾಗದೆ, ಸಾಲದ ಒತ್ತಡ ಜಾಸ್ತಿಯಾಗಿದ್ದರಿಂದ ಜಯನಗರದಲ್ಲಿರುವ ಮನೆ ಮಾರಿ ಸಾಲ ತೀರಿಸಲು ಗಣೇಶ್ ಅವರು ನಿರ್ಧರಿಸಿದ್ದರು.

ಈ ವಿಚಾರವಾಗಿ ಪತ್ನಿ ಸಹನಾ ಅವರೊಂದಿಗೆ ಹಲವು ಬಾರಿ ಚರ್ಚೆ ನಡೆಸಿದ್ದರು. ಇದಕ್ಕೆ ಪತ್ನಿ ಒಪ್ಪಿರಲಿಲ್ಲ. ಮತ್ತೊಂದು ಕಡೆ ಸಾಲಗಾರರ ಒತ್ತಡ ಹೆಚ್ಚಾಗಿತ್ತು. ಆರ್ಥಿಕ ಮುಗ್ಗಟ್ಟಿನಿಂದ ಹೊರಬರಲಾಗದೆ ತೀವ್ರ ಸಂಕಷ್ಟದಲ್ಲಿ ಗಣೇಶ್ ಅವರು ಸಿಲುಕಿದ್ದರು.ಮೊನ್ನೆ ಈ ವಿಚಾರವಾಗಿ ಪತ್ನಿ ಜತೆ ಪುನಃ ಚರ್ಚೆ ನಡೆಸಿದಾಗ ಮನೆ ಮಾರಲು ಒಪ್ಪದ ಕಾರಣ ದಂಪತಿ ನಡುವೆ ಜಗಳ ನಡೆದಿದೆ. ಈ ವೇಳೆ ತಾಳ್ಮೆ ಕಳೆದುಕೊಂಡ ಗಣೇಶ್ ತನ್ನ ಪಿಸ್ತೂಲಿನಿಂದ ಪತ್ನಿಗೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾನೆ. ನಂತರ ತನ್ನ ಮೂರೂ ಮಕ್ಕಳನ್ನು ಕಾರಿನಲ್ಲಿ ರೆಸಾರ್ಟ್‍ನ ಬಂಗಲೆಗೆ ಕರೆದುಕೊಂಡು ಹೋಗಿ ಅಲ್ಲಿದ್ದರು.

gun-firing

ನಿನ್ನೆ ಜಯನಗರ ಪೊಲೀಸರು ಗಣೇಶ್‍ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ, ನಾನು ರಿಯಲ್ ಎಸ್ಟೇಟ್ ಹಾಗೂ ರೆಸಾರ್ಟ್‍ನಲ್ಲಿ ಹಣ ತೊಡಗಿಸಿದ್ದೆ. ಆದರೆ, ನಿರೀಕ್ಷೆಯಂತೆ ಲಾಭ ಬರಲಿಲ್ಲ. ಇದರಿಂದ ಆರ್ಥಿಕ ನಷ್ಟ ಉಂಟಾಯಿತು. ಹೀಗಾಗುತ್ತದೆಂದು ನಾನೆಂದೂ ಅಂದುಕೊಂಡಿರಲಿಲ್ಲ. ರಿಯಲ್ ಎಸ್ಟೇಟ್ ಹಾಗೂ ರೆಸಾರ್ಟ್ ಆರಂಭಿಸುವ ಮುಂಚೆ ಯೋಚಿಸಿ ಸರಿಯಾದ ರೀತಿ ಯೋಜನೆ ಮಾಡಿಕೊಳ್ಳಬೇಕಿತ್ತು. ಮನೆ ಮಾರಿ ಸಾಲದ ಬಾಧೆಯಿಂದ ಹೊರಬರಬೇಕು ಎಂದು ಅಂದುಕೊಂಡಿದ್ದೆ. ಆದರೆ, ಪತ್ನಿ ಮನೆ ಮಾರಲು ಸಹಕರಿಸಲಿಲ್ಲ. ಇದರಿಂದ ಮಾನಸಿಕ ಒತ್ತಡ ಉಂಟಾಗಿ ಈ ಘಟನೆ ನಡೆದುಹೋಯಿತು ಎಂದು ವಿಚಾರಣೆ ವೇಳೆ ಪೊಲೀಸರ ಮುಂದೆ ಗಣೇಶ್ ಹೇಳಿದ್ದಾನೆ ಎಂದು ತಿಳಿದುಬಂದಿದೆ.

ಆತ್ಮಹತ್ಯೆಗೆ ನಿರ್ಧರಿಸಿದ್ದೆ:

Firing-Family-2

ಆರ್ಥಿಕ ಸಂಕಷ್ಟದಿಂದ ಹೊರಬರಲಾರದೆ ಪತ್ನಿ-ಮಕ್ಕಳನ್ನು ಕೊಂದು ನಾನೂ ಸಹ ಆತ್ಮಹತ್ಯೆ ಮಾಡಿಕೊಳ್ಳಬೇಕೆಂದು ನಿರ್ಧರಿಸಿದ್ದೆ. ಆದರೆ, ಅಂದುಕೊಂಡಂತೆ ಆಗಲಿಲ್ಲ ಎಂದು ಆತ ಪೊಲೀಸರ ಮುಂದೆ ಹೇಳಿದ್ದಾನೆ. ಘಟನೆಯಲ್ಲಿ ಪತ್ನಿಯ ಹತ್ಯೆಯಾಗಿದ್ದು, ಇಬ್ಬರು ಮಕ್ಕಳು ಗುಂಡೇಟಿನಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಇಂದು ಆರೋಪಿ ಗಣೇಶ್‍ನನ್ನು ನ್ಯಾಯಾಲಯದ ಮುಂದೆ ಜಯನಗರ ಠಾಣೆ ಪೊಲೀಸರು ಹಾಜರುಪಡಿಸಲಿದ್ದಾರೆ.

Facebook Comments

Sri Raghav

Admin