ಆಸ್ತಿ ವಿವಾದದಲ್ಲಿ ಒಂದೇ ಕುಟುಂಬದ ಐವರನ್ನು ಕೊಚ್ಚಿ ಕೊಂದಿದ್ದ ಆರೋಪಿ ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

5-Killedನಾಗ್ಪುರ/ಲೂಧಿಯಾನ, ಜೂ.23-ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ನಾಗ್ಪುರದಲ್ಲಿ ತನ್ನ ಮಗ ಸೇರಿದಂತೆ ಒಂದೇ ಕುಟುಂಬದ ಐವರನ್ನು ಹತ್ಯೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಪಂಜಾಬ್‍ನ ಲೂಧಿಯಾನದಲ್ಲಿ ಬಂಧಿಸಿದ್ದಾರೆ.  ವಿವೇಕ್ ಪಲಟ್ಕರ್ ಬಂಧಿತ ಹಂತಕ. ನಾಗ್ಪುರದ ಆರಾಧನಾ ನಗರದಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಈತ ತನ್ನ ಕುಟುಂಬದ ಐವರನ್ನು ಹತ್ಯೆ ಮಾಡಿ ಪರಾರಿಯಾಗಿದ್ದ. ಈತನನ್ನು ಸೆರೆ ಹಿಡಿಯಲು ನಾಗ್ಪುರ ಪೊಲೀಸರು ವಿಶೇಷ ತಂಡವೊಂದನ್ನು ರಚಿಸಿದ್ದರು.

ಈತ ತನ್ನ ಭಾವ ಕಮಲಾಕರ್ ಪವನ್‍ಕರ್, ಆತನ ಪತ್ನಿ ಅರ್ಚನಾ, ಆತನ ತಾಯಿ ಮೀರಾಬಾಯಿ, ಆತನ ಮಗಳು ವೇದಾಂತಿ ಹಾಗೂ ತನ್ನ ಮಗ ಕೃಷ್ಣ ಇವರನ್ನು ಹರಿತವಾದ ಆಯುಧಗಳಿಂದ ಕೊಂದು ಪಂಜಾಬ್‍ನ ಲೂಧಿಯಾನಕ್ಕೆ ಪರಾರಿಯಾಗಿದ್ದ ಎಂದು ಜಂಟಿ ಪೊಲೀಸ್ ಆಯುಕ್ತ ಶಿವಾಜಿ ಬೋದ್ಖೆ ತಿಳಿಸಿದ್ದಾರೆ. ಪೊಲೀಸರು ಗುರುವಾರ ಈತನನ್ನು ಲೂಧಿಯಾನದಲ್ಲಿ ಬಂಧಿಸಿ ನಾಗ್ಪುರಕ್ಕೆ ಕರೆತಂದಿದ್ದಾರೆ. ವಿಚಾರಣೆಗೆ ಒಳಪಡಿಸಿದಾಗ ಆಸ್ತಿ ವಿವಾದದ  ಹಿನ್ನೆಲೆಯಲ್ಲಿ ಈ ಕೃತ್ಯ ಎಸಗಿದ್ದಾಗಿ ವಿವೇಕ್ ಪಲಟ್ಕರ್ ಒಪ್ಪಿಕೊಂಡಿದ್ದಾನೆ. ಆದರೆ ಭಾವನನ್ನು ಕೊಲ್ಲುವುದು ತನ್ನ ಉದ್ದೇಶವಾಗಿತ್ತು. ಕೋಪದಲ್ಲಿ ಉಳಿದ ನಾಲ್ವರನ್ನೂ ಹತ್ಯೆ ಮಾಡಿದ್ದಾಗಿ ಆತ ತಿಳಿಸಿದ್ಧಾನೆ.

ಕುಟುಂಬದಲ್ಲಿ 9 ಎಕರೆಗಳ ಪಿತ್ರಾರ್ಜಿತ ಸ್ವತ್ತು ಇತ್ತು. ಇದರಲ್ಲಿ ಭಾಗ ಬೇಕೆಂದು ತನ್ನ ಭಾವ ಮತ್ತು ಸೋದರಿ ಆಸ್ತಿಗಾಗಿ ಒತ್ತಾಯಿಸುತ್ತಿದ್ದರು. ಇದು ಮಿತಿ ಮೀರಿ ಮಾನಸಿಕ ನೆಮ್ಮದಿ ಹಾಳಾಗಿತ್ತು. ಇದಕ್ಕಾಗಿ ಆತನಿಗೆ ಬುದ್ದಿ ಕಲಿಸಲು ನಾನು ಉದ್ದೇಶಿಸಿದೆ. ಆದರೆ ನನ್ನ ಮಗ ಸೇರಿ ಇತರ ನಾಲ್ವರೂ ಬಲಿಯಾದರು ಎಂದು ಆತ ವಿಚಾರಣೆ ವೇಳೆ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ.

Facebook Comments

Sri Raghav

Admin