ಕರೆಂಟ್ ಹೊಡೆದು ಸತ್ತ ಕೋತಿಗೆ ‘ಅಂತ್ಯಸಂಸ್ಕಾರ’ ಭಾಗ್ಯ

ಈ ಸುದ್ದಿಯನ್ನು ಶೇರ್ ಮಾಡಿ

Monkey--01
ಚನ್ನಪಟ್ಟಣ, ಜೂ.23- ವಿದ್ಯುತ್ ಕಂಬ ಏರುವಾಗ ಆಕಸ್ಮಿಕವಾಗಿ ತಂತಿಗೆ ಸಿಲುಕಿ ಕೋತಿಯೊಂದು ಸಾವನ್ನಪ್ಪಿದ್ದು , ಗ್ರಾಮಸ್ಥರೆಲ್ಲರೂ ಜತೆಗೂಡಿ ಒಬ್ಬ ಮಾನವನಿಗೆ ಮಾಡಬೇಕಾದ ವಿಧಿ ವಿಧಾನಗಳಂತೆ ಅಂತ್ಯಸಂಸ್ಕಾರ ಮಾಡಿ ಮಾನವೀಯತೆ ಮೆರೆದಿದ್ದಾರೆ. ತಾಲ್ಲೂಕಿನ ವಿರುಪಸಂದ್ರ ಗ್ರಾಮದಲ್ಲಿ ಈಶ್ವರ ದೇವಸ್ಥಾನದ ಬಳಿ ವಿದ್ಯುತ್ ಕಂಬ ಏರುವಾಗ ಹೈ ಟೆನ್ಷನ್ ವಿದ್ಯುತ್ ತಂತಿಗಳಿಗೆ ಸಿಲುಕಿ ಆಕಸ್ಮಿಕವಾಗಿ ಕೋತಿಯೊಂದು ಸ್ಥಳದಲ್ಲೇ ಸಾವನ್ನಪ್ಪಿದ್ದು, ವಿರುಪಸಂದ್ರ ಗ್ರಾಮಸ್ಥರು ಒಬ್ಬ ಮಾನವನಿಗೆ ಮಾಡುವ ಕ್ರಿಯಾದಿಗಳನ್ನು ಮಾಡಿ ಅಂತ್ಯಸಂಸ್ಕಾರವನ್ನು ನೆರವೇರಿಸಿದ್ದಾರೆ.  ಕೆಲವು ದಾನಿಗಳು ಮತ್ತು ಗ್ರಾಮಸ್ಥರೆಲ್ಲರೂ ಸೇರಿ ಅದ್ದೂರಿಯಾಗಿ ಸ್ವರ್ಗಾರೋಹಣ ಮಾಡಲು ನಿರ್ಧರಿಸಿದ್ದು , ಪ್ರತಿಯೊಬ್ಬರೂ ತಮ್ಮ ಕೈಲಾದ ಸಹಾಯ ಕೂಡ ಮಾಡುವಂತೆ ನಿರ್ಣಯ ಕೈಗೊಂಡಿದ್ದಾರೆ.

Facebook Comments

Sri Raghav

Admin