ಸುಷ್ಮಿತಾ ಮುಖ್ಯಮಂತ್ರಿ, ಅಮೃತ್ ಉಪಮುಖ್ಯಮಂತ್ರಿ..!

ಈ ಸುದ್ದಿಯನ್ನು ಶೇರ್ ಮಾಡಿ

Chikkaballapura--01

ಚಿಕ್ಕಬಳ್ಳಾಪುರ, ಜೂ.23- ನಿತ್ಯ ಶಾಲಾ ಆವರಣದಲ್ಲಿ ಮಕ್ಕಳ ಆಟದ ಕಲರವವಿದ್ದ ಶಾಲಾ ಆಟದ ಮೈದಾನದ ನೀರಸ ಮೌನವಿತ್ತು. ಎಲ್ಲೆಡೆ ಮಂಕುಕವಿದ ವಾತಾವರಣ, ಮೈದಾನದಲ್ಲೆಲ್ಲಾ ಎಲ್ಲಿ ನೋಡಿದರಲ್ಲಿ ಗುಸು-ಗುಸು ಪಿಸು ಮಾತುಗಳು ಹರಿದಾಡುತ್ತಿದ್ದವು.  ಒಂದಷ್ಟು ಮಂದಿಯ ತಂಡ ಮನೆ, ಮನೆ ತಿರುಗಾಡುತ್ತಿದ್ದದ್ದು ಕಾಣಿಸಿಕೊಂಡವರಿಗೆಲ್ಲಾ ಏನೋ ಓಲೈಸುವ ಮಾತುಗಳು ಕೇಳಿಬಂದವು ಹತ್ತಿರ ಹೋಗಿ ನೋಡಿದರೆ ಈ ಬಾರಿ ನಮಗೇ ಮತ ನೀಡಿ, ಪ್ರಣಾಳಿಕೆಯಂತೆ ನಡೆದುಕೊಳ್ಳುತ್ತೇವೆ. ನಮ್ಮ ಈ ಬಾರಿಯ ಅಭಿವೃದ್ದಿ ನೋಡಿ, ಹೀಗೆಲ್ಲಾ ತಮ್ಮದೇ ಆದ ದಾಟಿಯಲ್ಲಿ ಮತ ಕೇಳುತ್ತಿದ್ದರು.

ಮೊನ್ನೆ ತಾನೆ ಎಲೆಕ್ಷನ್ ಮುಗೀತು ಮತ್ತಿದ್ಯಾವುದು ಎಲೆಕ್ಷನ್ ಅಂದುಕೊಂಡಿರಾ……?  ಹೌದು! ಇದೆಲ್ಲಾ ನಡೆದದ್ದು ಎಲೆಕ್ಷನ್‍ಗಾಗಿಯೇ! ಮತದಾರರು ಮತ ನೀಡಲು ಸರದಿ ಸಾಲಿನಲ್ಲಿ ನಿಂತರು, ಯಾವುದೇ ದೊಂಬಿ, ಗಲಾಟೆ ಇರಲಿಲ್ಲ ಸಾಲಾಗಿ ಬಂದು ಮತ ಹಾಕುತ್ತಿದ್ದ ದೃಶ್ಯ ಎಲ್ಲರನ್ನು ನಿಬ್ಬೆರಗಾಗಿಸಿತ್ತು. ಇದೆಲ್ಲಾ ನಡೆದದ್ದು ಶಾಲಾ ಮಕ್ಕಳ ಅಣಕು ಚುನಾವಣೆ. ತಾಲ್ಲೂಕಿನ ನಂದಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ತಮ್ಮ ಶಾಲಾ ಆವರಣದಲ್ಲಿಯೇ ಇದ್ದ ಶಾಲಾ ಕೊಠಡಿಗಳ ಮತದಾನ ಕೇಂದ್ರಗಳಲ್ಲಿ ಮತ ಹಾಕಿ ತಮ್ಮ ನೆಚ್ಚಿನ ನಾಯಕನನ್ನು ಆಯ್ಕೆ ಮಾಡಿದರು. ಏಳನೇ ತರಗತಿಯ ವಿದ್ಯಾರ್ಥಿ ಕುಮಾರಿ ಸುಷ್ಮಿತಾ ಮುಖ್ಯಮಂತ್ರಿಯಾದರೆ, ಉಪ ಮುಖ್ಯಮಂತ್ರಿಯಾಗಿ ಅಮೃತ್ ಹಾಗೂ ವಿರೋಧ ಪಕ್ಷದ ನಾಯಕರಾಗಿ ಎಸ್.ಪುನೀತ್ ಆಯ್ಕೆಯಾದರು.

ರಾಜಕೀಯ ನಾಯಕರಂತೆಯೇ ಕಾಣಿಸಿಕೊಂಡ ವಿದ್ಯಾರ್ಥಿಗಳೆಲ್ಲಾ ಚುನಾವಣೆಗೆ ತಯಾರಾಗಿ ತಮ್ಮ ನಾಯಕನ ಆಯ್ಕೆಗೆ ತೀವ್ರ ಕಸರತ್ತು ಮಾಡಿದರು. ಈ ವೇಳೆ ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ, ಬದಲಿಗೆ ಸೌಹಾರ್ಧಯುತವಾಗಿ ಮತ ಹಾಕುವ ನಿಟಿನಲ್ಲಿ ವಿದ್ಯಾರ್ಥಿಗಳು ನಿರತರಾಗಿದ್ದರು.
ಮತದಾನ ಪ್ರಕ್ರಿಯೆ ಮುಗಿಯಿತು, ಮತದಾನದ ಫಲಿತಾಂಶ ಒಂದೆಡೆ ನಡೆಯುತ್ತಿತ್ತು. ವಿದ್ಯಾರ್ಥಿಗಳೆಲ್ಲಾ ಕೈ ಕೈ ಹಿಸುಕಿಕೊಳ್ಳುತ್ತಿದ್ದರು. ಕೊನೆಗೆ ಫಲಿತಾಂಶವೂ ಪ್ರಕಟವಾಯಿತು. ನೂತನ ಮುಖ್ಯಮಂತ್ರಿಗೆ ಶಾಲೆಯ ಮುಖ್ಯ ಶಿಕ್ಷಕಿ ಎ.ಸಗಾಯೀಮೇರಿ ಪ್ರಮಾಣ ವಚನ ಬೋಧಿಸಿದರು. ಈ ಎಲ್ಲಾ ದೃಶ್ಯಗಳನ್ನು ಕಣ್ಣು ಮಿಟುಕಿಸದೇ ನೋಡುತ್ತಿದ್ದ ವಿದ್ಯಾರ್ಥಿಗಳಿಗೆಲ್ಲಾ ಅಶ್ಯರ್ಯವೋ ಅಶ್ಯರ್ಯ. ಚುನಾವಣೆ ಎಂದರೆ ಹೀಗೇನಾ ಎಂಬಂತೆ ವಿದ್ಯಾರ್ಥಿಗಳೆಲ್ಲಾ ಪ್ರಜಾಪ್ರಭುತ್ವದ ಮಹತ್ವ ತಿಳಿಯುವ ಮೂಲಕ ಕುತೂಹಲಕ್ಕೆ ತೆರೆ ಬಿತ್ತು.

ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಮಕ್ಕಳಿಗೆ ಜಾಗೃತಿ ಉಂಟು ಮಾಡಲು ಹಾದೂ ಅಭಿವೃದ್ಧಿ ಪಥದತ್ತ ದೇಶ ಮುನ್ನಡೆಗೆ ಇದೊಂದು ರಹದಾರಿಯಾಗಿ ಕಂಡು ಬಂತು. ಮಕ್ಕಳಿಗೆ ಚುನಾವಣೆಯ ಅಣಕು ಪ್ರದರ್ಶನ ಮಾಡುವ ಮೂಲಕ ಜಾಗೃತಿ ಉಂಟು ಮಾಡಿದ್ದರು. ಈ ವೇಳೆ ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಸುರೇಶ್ ಶಾಲಾ ಸಹ ಶಿಕ್ಷಕರಾದ ನಾರಾಯಣಸ್ವಾಮಿ, ಎ.ರಾಧ, ಜಿ.ಪದ್ಮಾ ವೀರಭದ್ರಶಾಸ್ತ್ರಿ ಸೇರಿದಂತೆ ಎಸ್‍ಡಿಎಂಸಿ ಸದಸ್ಯರು ಹಾಗೂ ಗ್ರಾಮದ ಮುಖಂಡರು ಹಾಜರಿದ್ದರು.

Facebook Comments

Sri Raghav

Admin