ಸರ್ಬಿಯಾ ಮಣಿಸಿದ ಸ್ಟಿಟ್ಜರ್‍ಲೆಂಡ್ ನಾಕೌಟ್ ಆಸೆ ಜೀವಂತ

ಈ ಸುದ್ದಿಯನ್ನು ಶೇರ್ ಮಾಡಿ

Seis

ಕಲಿನಿನ್‍ಗ್ರಾಡ್, ಜೂ.23-ರಷ್ಯಾದಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಸ್ಟಿಟ್ಜರ್‍ಲೆಂಡ್ ತಂಡ ಸರ್ಬಿಯಾವನ್ನು 2-1 ಗೋಲಿನಿಂದ ಮಣಿಸಿದೆ. ಇದರೊಂದಿಗೆ ಸ್ವಿಸ್ ಪಡೆ ನಾಕೌಟ್ ಹಂತಕ್ಕೇರುವ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಕಲಿನಿನ್‍ಗ್ರಾಡ್‍ನಲ್ಲಿ ನಡೆದ ಇ ಗುಂಪಿನ ರೋಚಕ ಹಣಾಹಣಿಯಲ್ಲಿ ಸ್ವಿಟ್ಜರ್‍ಲೆಂಡ್ ಪರ ಗ್ರಾನಿಟ್ ಮತ್ತು ಶಾಖಿರಿ ತಲಾ ಒಂದು ಗೋಲು ಬಾರಿಸಿ ಗೆಲುವು ತಂದುಕೊಟ್ಟರು.

ಪಂದ್ಯದ ಮೊದಲಾರ್ಧದ 5ನೇ ನಿಮಿಷದಲ್ಲಿ ಸರ್ಬಿಯಾದ ಮಿಟ್ರೊವಿಕ್ ಹೆಡ್ ಮೂಲಕ ಆಕರ್ಷಕ ಗೋಲು ಬಾರಿಸಿ ತಂಡದ ಮುನ್ನಡೆಗೆ ಕಾರಣಕರ್ತರಾದರು. ಆರಂಭದಲ್ಲಿ ಆಕ್ರಮಣ ಆಟಕ್ಕೆ ಮುಂದಾದ ಸರ್ಬಿಯಾ, ಸ್ವಿಸ್ ರಕ್ಷಣಾ ಪಡೆಯನ್ನು ಮೀರಿ ಉತ್ತಮ ಪ್ರದರ್ಶನ ನೀಡಿತು. ಆದರೆ ನಂತರದ ಆಟದಲ್ಲಿ ಸ್ವಿಟ್ಜರ್‍ಲೆಂಡ್ ತೀವ್ರ ಪೈಪೋಟಿ ನೀಡಿದರು.

ಮೊದಲಾರ್ಧದಲ್ಲಿ 1-0 ಗೋಲಿನಿಂದ ಹಿನ್ನಡೆಯಲ್ಲಿದ್ದ ಸ್ವಿಸ್, ದ್ವಿತೀಯಾರ್ಧದಲ್ಲಿ ಪುಟಿದೆದ್ದಿತು. 52ನೇ ನಿಮಿಷದಲ್ಲಿ ಗ್ರಾನಿಟ್ ಕಾಕ್ಸಾ, ಸರ್ಬಿಯಾ ಗೋಲ್ ಕೀಪರ್‍ನನ್ನು ವಂಚಿಸಿ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸಿದರು. 90ನೇ ನಿಮಿಷದಲ್ಲಿ ತಾಖಿರಿ ಮತ್ತೊಂದು ಗೋಲು ಬಾರಿಸಿದರು. ಎರಡು ಭರ್ಜರಿ ಗೋಲುಗಳ ನೆರವಿನಿಂದ ಸರ್ಬಿಯಾ ವಿರುದ್ಧ ಜಯ ಸಾಧಿಸಿದ ಸ್ವಿಸ್ ಪಡೆ ನಾಕೌಟ್ ಹಂತಕ್ಕೇರುವ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.

Facebook Comments

Sri Raghav

Admin