ಕಾಶ್ಮೀರದಲ್ಲಿ ‘ಆಪರೇಷನ್ ಆಲ್ ಔಟ್’ : ಇಂದು ಇಬ್ಬರು ಎಲ್ ಇಟಿ ಉಗ್ರರ ಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

jammu--kashmir

ಶ್ರೀನಗರ. ಜೂ.24 : ಜಮ್ಮು ಕಾಶ್ಮೀರವನ್ನು ಕ್ಲೀನ್ ಮಾಡುವ ಉದ್ದೇಶದಿಂದ ‘ಆಪರೇಷನ್ ಆಲ್ ಔಟ್’ ಹೆಸರಿನಲ್ಲಿ ಕೇಂದ್ರ ಸರ್ಕಾರ ಆರಂಭಿಸಿರುವ ಉಗ್ರರ ಹುಟ್ಟಡಗಿಸುವ ಕಾರ್ಯಕ್ಕೆ ಇಂದು ಮತ್ತೊಂದು ಮಹತ್ವದ ಜಯ ಸಿಕ್ಕಿದ್ದು ದಕ್ಷಿಣ ಕಾಶ್ಮೀರದ ಕುಲ್ ಗಾಮ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಎನ್ ಕೌಂಟರ್ ನಲ್ಲಿ ಲಷ್ಕರ್ ಇ- ತೊಯ್ಬಾ ಸಂಘಟನೆಗೆ ಸೇರಿದ ಇಬ್ಬರು ಉಗ್ರರು ಹತ್ಯೆ ಮಾಡಿದ್ದಾರೆ. ಸೇನೆ ಹಾಗೂ ಸಿಆರ್ ಪಿಎಫ್ ಜೊತೆಗೂಡಿ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮಧ್ಯಾಹ್ನ ಕುಲ್ ಗಾಮ್ ಬಳಿಯ ಹಳ್ಳಿಯೊಂದರಲ್ಲಿ ಈ ಎನ್ ಕೌಂಟರ್ ನಡೆಸಲಾಗಿದೆ. ಜೂನ್. 28 ರಿಂದ ಆರಂಭವಾಗಲಿರುವ ಅಮರಾನಾಥ ಯಾತ್ರೆ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ತೆರವುಗೊಳಿಸಲಾಗಿದ್ದು, ಅಲ್ಲಿ ಎನ್ ಕೌಂಟರ್ ಕಾರ್ಯಾಚರಣೆ ನಡೆಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಇದೆ ವೇಳೆ ಮೂವರು ಉಗ್ರರು ಭದ್ರತಾ ಸಿಬ್ಬಂದಿಗಳಿಗೆ ಶರಣಾಗಿದ್ದಾರೆ ಎನ್ನಲಾಗಿದೆ.

ಇದೀಗ ಜಮ್ಮುಕಾಶ್ಮೀರದಲ್ಲಿ ಉಗ್ರರನ್ನು ಸಂಪೂರ್ಣವಾಗಿ ಮಟ್ಟ ಹಾಕಲು ತೀರ್ಮಾನಿಸಿರುವ ಕೇಂದ್ರ ಸರ್ಕಾರ ಇದೇ ಮೊದಲ ಬಾರಿಗೆ ಸೇನಾ ಪಡೆ ಮತ್ತು ರಾಷ್ಟ್ರೀಯ ಭದ್ರತಾ ದಳ(ಎನ್‍ಎಸ್‍ಜಿ)ದ ಕಮಾಂಡೋಗಳು ಉಗ್ರರನ್ನು ಬೇಟೆಯಾಡಲು ಮುಂದಾಗಿದೆ. ಈಗಾಗಲೇ ಕೆಲವು ಉಗ್ರರನ್ನು ಸೇನೆ ಹೊಡೆದುರುಳಿಸಿದೆ.
ಕಣಿವೆ ರಾಜ್ಯ ಜಮ್ಮುಕಾಶ್ಮೀರ ಸೇರಿದಂತೆ ಭಾರತದ ನಾನಾ ಕಡೆ ಕಾನೂನು ಸುವ್ಯವಸ್ಥೆ ಹಾಗೂ ಶಾಂತಿಗೆ ಧಕ್ಕೆಗೆ ಮಾಡುತ್ತಿರುವ ಈ ಉಗ್ರರ ಹೆಡೆಮುರಿ ಕಟ್ಟಲು ಆಪರೇಷನ್ ಆಲ್ ಔಟ್ ಕಾರ್ಯಾಚರಣೆ ನಡೆಸುವಂತೆ ಸೇನಾ ಪಡೆಗೆ ಕೇಂದ್ರ ಸರ್ಕಾರ ಸೂಚಿಸಿತ್ತು.
ಮೂಲಗಳ ಪ್ರಕಾರ ಜಮ್ಮುಕಾಶ್ಮೀರದಲ್ಲಿ ಪಾಕಿಸ್ತಾನ ಮೂಲದ ವಿವಿಧ ಭಯೋತ್ಪಾದನೆ ಸಂಘಟನೆಗಳ ಒಟ್ಟು300 ಉಗ್ರರು ಭಾರತದ ಮೇಲೆ ದಾಳಿ ನಡೆಸಲು ಸಿದ್ಧರಾಗಿದ್ದಾರೆ ಎನ್ನಲಾಗಿದೆ. ಇದರಲ್ಲಿ ಸದ್ಯಕ್ಕೆ ಮೋಸ್ಟ್ ವಾಂಟೆಡ್ 21 ಉಗ್ರರ ಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ನಿನ್ನೆಯಷ್ಟೇ ಬಿಡುಗಡೆ ಮಾಡಲಾಗಿತ್ತು. ಈ ಉಗ್ರರನ್ನು ಎನ್‍ಕೌಂಟರ್ ಮಾಡಲು ಸೇನೆ ಕಾರ್ಯಾಚರಣೆ ನಡೆಸುತ್ತಿದೆ.

Facebook Comments

Sri Raghav

Admin