“ಸುಗಂಧ ಹೂವಿನ ಹಾರ ಬೇಡ, ಬೇಕಾದರೆ ಕಲ್ಲಿನ ಹಾರ ಹಾಕಿ” : ಡಿ.ಕೆ.ಶಿವಕುಮಾರ್

ಈ ಸುದ್ದಿಯನ್ನು ಶೇರ್ ಮಾಡಿ

D-K-Shivakumar-01

ಬೆಂಗಳೂರು, ಜೂ.24- ಸುಗಂಧ ಹೂವಿನ ಹಾರಕ್ಕೂ ನನಗೂ ಆಗಿ ಬರುವುದಿಲ್ಲ. ಬೇಕಾದರೆ ಕಲ್ಲಿನ ಹಾರ ಹಾಕಿ…. ಹೀಗೆಂದು ಹೇಳಿದವರು ನೀರಾವರಿ ಸಚಿವ ಡಿ.ಕೆ.ಶಿವಕುಮಾರ್. ಮುಳವಾಡ ಏತನೀರಾವರಿ ಯೋಜನೆಯ ಬಳೂತಿಜಾಕ್ವೆಲ್‍ಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಭಿಮಾನಿಗಳು ಹೂವಿನ ಹಾರ ಹಾಕಲು ಬಂದಾಗ ಸುಗಂಧ ರಾಜ ಹೂವಿನ ಹಾರ ಬೇಡ. ಬೇಕಾದರೆ ಕಲ್ಲಿನ ಹೂವಿನ ಹಾರ ಹಾಕಿ. ಈ ಹೂವಿನ ಹಾರ ಬೇಡ ಎಂದು ಹೇಳಿದರು.

ಸುಗಂಧ ರಾಜ ಹೂವಿನ ಹಾರ ಕಂಡರೆ ಡಿಕೆಶಿಗೆ ಅಷ್ಟೊಂದು ಭಯನಾ ಎಂದು ಅಲ್ಲಿದ್ದ ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದರು. ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲ್ಲೂಕಿನ ಮುಳವಾಡ ಏತನೀರಾವರಿ ಯೋಜನೆ ಪರಿಶೀಲನೆಗೆ ಆಗಮಿಸಿದ ಡಿ.ಕೆ.ಶಿವಕುಮಾರ್ ಅವರ ಜತೆ ಆರೋಗ್ಯ ಸಚಿವ ಶಿವಾನಂದಪಾಟೀಲ್ ಮುಂತಾದವರು ಭಾಗವಹಿಸಿದ್ದರು.

Facebook Comments

Sri Raghav

Admin