ಮಳೆಗಾಲದಲ್ಲಿ ತ್ವಚೆ ರಕ್ಷಣೆಗೆ ಸಿಂಪಲ್ ಸಲಹೆ

ಈ ಸುದ್ದಿಯನ್ನು ಶೇರ್ ಮಾಡಿ

Skin-Girl--01

ಮಳೆಗಾಲದಲ್ಲೂ ಬೆವರು ಮತ್ತು ಮುಖದ ತೈಲದಿಂದ ಸಂಗ್ರಹಗೊಳ್ಳುವ ಕೊಳೆಯಿಂದ ತ್ವಚೆಯ ರೋಮರಂಧ್ರಗಳು ಮುಚ್ಚಲ್ಪಡುತ್ತವೆ. ಇದರಿಂದ ಮೊಡವೆ-ಗುಳ್ಳೆ ಮತ್ತು ಬೊಕ್ಕೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ.ಆದಕಾರಣ ಮಳೆಗಾಲದಲ್ಲಿ ತ್ವಚೆಯ ಸ್ವಚ್ಛತೆ ಬಗ್ಗೆ ಗಮನ ಕೊಡುವುದು ಅಗತ್ಯ. ಸ್ಕಿನ್ ಟಾನಿಕ್ ಬಳಸುವುದರಿಂದ ಪ್ರಯೋಜನವಿದೆ. ಇದರಿಂದ ತ್ವಚೆಯ ರೋಮರಂಧ್ರಗಳು ಸ್ವಚ್ಛವಾಗಿ ತಾಜಾತನದ ಅನುಭವ ನೀಡುತ್ತದೆ. ಎಣ್ಣೆಯುಕ್ತ ಮುಖವಾಗಿದ್ದರೆ, ಬೇವಿನ ಎಲೆಗಳನ್ನು ಕುದಿಸಿ ನೀರು ಸೋಸಿಕೊಂಡು ನೀರನ್ನು ರೆಫ್ರಿಜರೇಟರ್‍ನಲ್ಲಿ ಇಟ್ಟುಕೊಳ್ಳಿ.ಈ ನೀರಿನಿಂದ ದಿನಕ್ಕೆ ಮೂರರಿಂದ ನಾಲ್ಕು ಬಾರಿ ಮುಖವನ್ನು ಸ್ವಚ್ಛಗೊಳಿಸಿಕೊಳ್ಳಿ. ದಿನವಿಡೀ ತಾಜಾತನದ ಅನುಭವ ಪಡೆಯಲು ಸ್ನಾನದ ನೀರಿನಲ್ಲಿ ರಾತ್ರಿಯೇ ತಾಜಾ ಗುಲಾಬಿ ಹೂಗಳ ಪಕಳೆಗಳನ್ನು ಹಾಕಿಡಿ.ಬೆಳಿಗ್ಗೆ ಅದೇ ಗುಲಾಬಿಯುಕ್ತ ನೀರಿನಿಂದ ಮುಖ ತೊಳೆಯಬಹುದು.ಈ ನೀರಿನಿಂದ ಸ್ನಾನ ಮಾಡಿದರೆ ಫ್ರೆಶ್‍ನೆಸ್‍ನ ಅನುಭೂತಿ ಉಂಟಾಗುತ್ತದೆ.

Facebook Comments

Sri Raghav

Admin