ಸಿರಿಯಾ ಮೇಲೆ ರಷ್ಯಾದಿಂದ ಬಾಂಬ್ ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

Rassian--01
ಬೈರುತ್, ಜೂ.24- ದಕ್ಷಿಣ ಸಿರಿಯಾದ ಬಂಡುಕೋರರ ಪ್ರಾಬಲ್ಯವಿರುವ ಪ್ರಾಂತ್ಯಗಳ ಮೇಲೆ ರಷ್ಯಾ ವಾಯು ದಾಳಿ ನಡೆಸಿದ್ದು ಸಾವು-ನೋವು ಸಂಭವಿಸಿದೆ. ಒಂದು ವರ್ಷದ ಕದನ ವಿರಾಮ ಮಧ್ಯಸ್ಥಿಕೆ ನಂತರ ರಷ್ಯಾ ನಡೆಸಿದ ಪ್ರಥಮ ಬಾಂಬ್ ದಾಳಿ ಇದಾಗಿದೆ. ರಷ್ಯಾ ವಾಯು ದಾಳಿಗೆ ಪ್ರತ್ಯುತ್ತರ ನೀಡಲು ಬಂಡುಕೋರರು ಸಿದ್ದತೆ ನಡೆಸಿದ್ದು, ಅಲ್ಲಿ ಸಮರ ಸದೃಶ ವಾತಾವರಣ ಸೃಷ್ಟಿಯಾಗಿದೆ.

ಸಿರಿಯಾದಲ್ಲಿ ಏಳು ವರ್ಷಗಳ ಅಂತರ್ಯುದ್ಧಕ್ಕೆ ಕಾರಣರಾದ ಬಂಡುಕೋರರು ದಕ್ಷಿಣ ಭಾಗದಲ್ಲಿ ಪ್ರಾಬಲ್ಯ ಹೊಂದಿದ್ದಾರೆ. ಅವರನ್ನು ಮಟ್ಟ ಹಾಕಲು ರಷ್ಯಾ ಇದೇ ಮೊದಲ ಬಾರಿಗೆ ವಾಯು ದಾಳಿ ನಡೆಸಿದ್ದು, ಸಾವು-ನೋವು ಉಂಟಾಗಿದೆ ಎಂದು ವೀಕ್ಷಣಾ ಸಂಸ್ಥೆಯೊಂದು ಹೇಳಿದೆ. ರಾಜಧಾನಿ ಡಮಸ್ಕಸ್‍ನನ್ನು ಬಂಡುಕೋರರ ಕಪಿಮುಷ್ಠಿಯಿಂದ ಬಿಡಿಸಿರುವ ಸಿರಿಯಾ ಅಧ್ಯಕ್ಷ ಬಷರ್ ಅಲ್-ಅಸಾದ್, ದೇಶದ ದಕ್ಷಿಣ ಭಾಗದಲ್ಲಿರುವ ಡರಾ ಮತ್ತು ಸ್ವೀಡಾ ಪ್ರಾಂತ್ಯಗಳನ್ನು ವಶಪಡಿಸಿಕೊಳ್ಳಲು ಮುಂದಾಗಿದ್ದು, ಇದಕ್ಕೆ ರಷ್ಯಾ ಸೇನೆ ಸಾಥ್ ನೀಡಿದೆ.

Facebook Comments

Sri Raghav

Admin