64 ವರ್ಷಗಳ ಗೋಲು ರಹಿತ ಪಂದ್ಯಗಳ ದಾಖಲೆ ಮುರಿದ ರಷ್ಯಾ ಫಿಫಾ ಕಪ್

ಈ ಸುದ್ದಿಯನ್ನು ಶೇರ್ ಮಾಡಿ

Fifa-01

ಕಜಾನ್ (ರಷ್ಯಾ), ಜೂ. 24- ದಿನದಿಂದ ದಿನಕ್ಕೆ ಕುತೂಹಲ ಹುಟ್ಟಿಸುತ್ತಿರುವ ಫಿಫಾ ವಿಶ್ವಕಪ್ ಈಗ ಹೊಸದೊಂದು ದಾಖಲೆಯನ್ನು ಬರೆದಿದೆ. ಸ್ವಿಡ್ಜರ್‍ಲ್ಯಾಂಡ್‍ನಲ್ಲಿ 1954 ರಲ್ಲಿ ವಿಶ್ವಕಪ್‍ನಿಂದಲೂ ಅವಲೋಕಿಸುತ್ತಾ ಬಂದರೆ, ಇದುವರೆಗೂ 27 ಗೋಲುಗಳು ದಾಖಲಾಗುವ ಮೂಲಕ 64 ವರ್ಷಗಳ ಹಿಂದಿನ ದಾಖಲೆಯನ್ನು ಅಳಿಸಿಹಾಕಿದೆ.  2018ರ ಫಿಫಾ ವಿಶ್ವಕಪ್‍ನ ಆರಂಭದಲ್ಲೇ ಅತಿಥೇಯ ರಷ್ಯಾ 5-0 ಯಿಂದ ಸೌದಿ ಅರೇಬಿಯಾದ ವಿರುದ್ಧ ಗೋಲು ರಹಿತ ವಿಜಯ ಸಾಧಿಸಿದರೆ, ನಂತರ ನಡೆದ ಈಜಿಪ್ಟ್ – ಉರುಗ್ವೆ ಪಂದ್ಯದಲ್ಲೂ 1-0 ಗೋಲು ಅಂತರದಿಂದ ಉರುಗ್ವೆ ಜಯ ಸಾಧಿಸಿತು. ಆರಂಭಿಕ ದಿನವೇ ನಡೆದ ಮತ್ತೊಂದು ಪಂದ್ಯದಲ್ಲಿ ಮೊರಾಕೊ ವಿರುದ್ಧ ಇರಾನ್ ಕೇವಲ 1 ಗೋಲಿನಿಂದ ಜಯ ಸಾಧಿಸಿದರೆ, ಡೆನ್ಮಾರ್ಕ್ ತಂಡವು ಕೂಡ ಪೆರು ವಿರುದ್ಧ ನಡೆದ ಪಂದ್ಯದಲ್ಲಿ 1 ಗೋಲಿನಿಂದ ವಿಜಯಿಯಾಗಿದೆ. ಕೊಟ್ರಿಯಾ ಹಾಗೂ ನೈಜಿರಿಯಾ ಪಂದ್ಯದಲ್ಲಿ ಕೊಟ್ರಿಯಾ 2 ಗೋಲು ಗಳಿಸಿದರೆ, ನೈಜಿರಿಯಾ ಯಾವುದೇ ಗೋಲು ದಾಖಲಿಸದೆ ಸೋಲು ಕಂಡಿತು.

ಸೈಬಿರಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಕೋಸ್ಟಾರಿಕಾ ಕೇವಲ 1 ಗೋಲು ಗಳಿಸಿ ವಿಜಯದ ಪತಾಕೆ ಹಾರಿಸಿದರೆ, ಮೆಕ್ಸಿಕೋ ಹಾಗೂ ಜರ್ಮನಿ ವಿರುದ್ಧದ ಪಂದ್ಯದಲ್ಲಿ ಮೆಕ್ಸಿಕೋ ಜಯಿಸಿದ್ದು ಕೇವಲ 1-0 ಗೋಲುಗಳ ಅಂತರದಿಂದಲೇ. ಸ್ವಿಡನ್ ಕೂಡ ಸೌತ್ ಕೊರಿಯಾ ವಿರುದ್ಧ 1 ಗೋಲು ಗಳಿಸಿ ವಿಜಯಿಯಾಗಿತ್ತು. ಜಿ ಗ್ರೂಪ್‍ನಲ್ಲಿ ಪರಸ್ಪರ ಪೈಪೋಟಿ ನಡೆಸಿದ್ದ ಬೆಲ್ಜಿಯಂ 3 ಗೋಲು ಗಳಿಸಿ ಜಯಿಸಿದರೆ ಪನಾಮಾದ ಆಟಗಾರರು ಆ ತಂಡದಲ್ಲಿ ಒಂದೇ ಒಂದು ಗೋಲು ದಾಖಲಿಸಿರಲಿಲ್ಲ.

ಜೂನ್ 20 ರಂದು ನಡೆದ ಪೋರ್ಚುಗಲ್ ಹಾಗೂ ಮೊರಾಕೋ ಪಂದ್ಯದಲ್ಲಿ ಪೋರ್ಚುಗಲ್ ಜಯಿಸಿದ್ದು ಕೂಡ 1-0 ಗೋಲಿನಿಂದಲೇ. ಅದೇ ದಿನ ನಡೆದ ಪಂದ್ಯಗಳಲ್ಲಿ ಉರುಗ್ವೆ ಹಾಗೂ ಸ್ಪೇನ್ ತಂಡಗಳು ಸೌದಿ ಅರೇಬಿಯಾ ಹಾಗೂ ಇರಾನ್ ವಿರುದ್ಧ ಜಯ ಗಳಿಸಿದ್ದು ಕೂಡ ಕೇವಲ 1 ಗೋಲಿನಿಂದಲೇ.

ಜೂನ್ 21 ರಂದು ನಡೆದ ಮೂರು ಪಂದ್ಯಗಳಲ್ಲೂ ಕೂಡ ಫ್ರಾನ್ಸ್ (1 ಗೋಲು) ಪೆರು ವಿರುದ್ಧ ಜಯ ಗಳಿಸಿತ್ತು.ಜೂನ್ 22 ರಂದು ನಡೆದ ಪಂದ್ಯಗಳಲ್ಲಿ ಕೊರ್ಟಾರಿಕಾ (3 ಗೋಲುಗಳು), ಬ್ರೆಜಿಲ್ (2ಗೋಲುಗಳು) ಜಯ ಸಾಧಿಸಿದ್ದರೆ, ಎದುರಾಳಿ ತಂಡಗಳಾದ ಮೆಸ್ಸಿಯಂತಹ ಘಟಾನುಘಾಟಿ ಆಟಗಾರ ಪ್ರತಿನಿಧಿಸುವ ಅರ್ಜೆಂಟೀನಾ, ಕೋಸ್ಟಾರಿಕಾ ತಂಡಗಳು ಒಂದೇ ಒಂದು ಗೋಲು ಗಳಿಸಲು ವಿಫಲವಾಗಿತ್ತು. ಹೀಗೆ ಫುಟ್ಬಾಲ್ ಇತಿಹಾಸದಲ್ಲೇ 27 ಗೋಲುಗಳು ಗೆದ್ದ ತಂಡಗಳಿಂದ ದಾಖಲಾಗಿದೆ.

# ಡ್ರಾ ರಹಿತ ಗೋಲುಗಳ ಪ್ರಮಾಣ
1958- 9 ಗೋಲು, 1962-8 ಗೋಲು, 1966-1 ಗೋಲು, 1970-2 ಗೋಲು, 1974-1 ಗೋಲು,1978-1 ಗೋಲು,1982-2 ಗೋಲು,1986- 6 ಗೋಲುಗಳು,1990-12 ಗೋಲುಗಳು, 1994-17 ಗೋಲು, 2014- 13 ಗೋಲುಗಳು ದಾಖಲಾಗಿದ್ದವು.

# ಗೋಲು ಪ್ರಮಾಣ ಕಡಿಮೆ:
ಈ ವಾರ ಗೋಲ್ ಪ್ರಮಾಣವು ಕೂಡ ಕಡಿಮೆ ಯಾಗಿದೆ 2014ರಲ್ಲಿ 2.7ರಂತೆ ಗೋಲು ದಾಖಲಾಗಿದ್ದರೆ, ಈ ವರ್ಷ ಅದರ ಪ್ರಮಾಣ 2.4 ಕ್ಕೆ ಇಳಿದಿದೆ, ಆದರೆ 2010ರಲ್ಲಿ 2.3ರಂತೆ ಗೋಲು ದಾಖಲಾಗಿರುವುದು ಅತ್ಯಂತ ಕಡಿಮೆ ಪ್ರದರ್ಶನವಾಗಿದೆ.

Facebook Comments

Sri Raghav

Admin