ಆದಿತ್ಯ ಮಿಲ್ಕ್ ಅಂಡ್ ಐಸ್‍ಕ್ರೀಂ ಕಂಪೆನಿಗೆ ಬ್ರಿಟನ್ ನಿಯೋಗ ಭೇಟಿ

ಈ ಸುದ್ದಿಯನ್ನು ಶೇರ್ ಮಾಡಿ

adhitya-milk

ಬೆಳಗಾವಿ, ಜೂ.25- ದೇಶಾದ್ಯಂತ ಐಸ್‍ಕ್ರೀಮ್ ಪ್ರಿಯರನ್ನು ಸೆಳೆದಿರುವ ಬೆಳಗಾವಿ ಮೂಲದ ಆದಿತ್ಯ ಮಿಲ್ಕ್ ಅಂಡ್ ಐಸ್‍ಕ್ರೀಮ್ ಘಟಕಕ್ಕೆ ಬ್ರಿಟನ್‍ನ ಯುನಿಲಿವರ್ ಗ್ಲೋಬಲ್ ಐಸ್‍ಕ್ರೀಮ್ ಕಂಪೆನಿಯ ಕಾರ್ಯ ನಿರ್ವಾಹಕ ಉಪಾಧ್ಯಕ್ಷ ಮ್ಯಾಟ್ ಕ್ಲೋಸ್ ನೇತೃತ್ವದ 10 ಸದಸ್ಯರ ನಿಯೋಗ ಭೇಟಿ ನೀಡಿತ್ತು.
ಆಧುನಿಕ ಯಂತ್ರೋಪಕರಣಗಳನ್ನು ಮತ್ತು ಗುಣಮಟ್ಟದ ಉತ್ಪನ್ನಗಳನ್ನು ಬಳಸಿ ವಿಶ್ವ ದರ್ಜೆಯ ಐಸ್‍ಕ್ರೀಮ್‍ಗಳನ್ನು ಮತ್ತು ಇತರೆ ಉತ್ಪನ್ನಗಳನ್ನು ತಯಾರಿಸುತ್ತಿರುವ ಆದಿತ್ಯ ಕಂಪೆನಿಯ ಕಾರ್ಯ ವಿಧಾನಗಳನ್ನು ನಿಯೋಗದ ಸದಸ್ಯರು ಪ್ರಶಂಸಿಸಿದರು. ಈ ಕುರಿತು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಶಿವಕಾಂತ್ ಸಿದ್ನಾಳ್ ಮಾತನಾಡಿ, ನಮಗೆ ಇದೊಂದು ಹೆಮ್ಮೆಯ ಕ್ಷಣ. ಬ್ರಿಟನ್‍ನ ನಿಯೋಗ ಭೇಟಿ ನೀಡಿ ನಮ್ಮ ಕಾರ್ಯ ವಿಧಾನವನ್ನು ಮೆಚ್ಚಿರುವುದು ಅತ್ಯಂತ ಖುಷಿ ತಂದಿದೆ. ಪ್ರಗತಿಯತ್ತ ದಾಪುಗಾಲಿಟ್ಟಿರುವ ಭಾರತ ದೇಶ ಮುಂದಿನ ಐದು ವರ್ಷಗಳಲ್ಲಿ ಜಿಡಿಪಿ ಶೇ.12ರ ಗಡಿ ದಾಟುವುದು ನಿಶ್ಚಿತ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

2006ರಲ್ಲಿ ಹಾಲಿನ ಘಟಕ ಕಾರ್ಯಾರಂಭ ಮಾಡಿ ಇಂದು ಆದಿತ್ಯ ಮಿಲ್ಕ್ ಅಂಡ್ ಐಸ್‍ಕ್ರೀಮ್ ಲಿಮಿಟೆಡ್ ಬೃಹತ್ತಾಗಿ ಬೆಳೆದಿದೆ. ಸುಮಾರು 180 ಕಿ.ಮೀ ವ್ಯಾಪ್ತಿಯ 1300 ಹಳ್ಳಿಗಳಲ್ಲಿ ರೈತರಿಂದ ಹಾಲನ್ನು ಸಂಗ್ರಹಿಸಿ ಅದನ್ನು 130 ವಿತರಣಾ ಘಟಕಗಳನ್ನು ಹಾಗೂ 120 ಮಳಿಗೆಗಳನ್ನು ಈಗಾಗಲೇ ಸರಬರಾಜು ಮಾಡುತ್ತೇವೆ. ಈಗ ನಿತ್ಯ 1.5 ಲಕ್ಷ ಲೀಟರ್ ಹಾಲು ಸಂಗ್ರಹಗವಾಗುತ್ತಿದೆ. ಇದು ದಿನೇ ದಿನೇ ಬೆಳೆಯುತ್ತಿದೆ ಎಂದು ಹೇಳಿದರು.

Facebook Comments

Sri Raghav

Admin