ಕಸದ ಕಂಟ್ರಾಕ್ಟರ್ ಜೊತೆ ಮೇಯರ್ ಮಾತುಕತೆ ವಿಫಲ, ಡಿಸಿಎಂ ಮೊರೆ ಹೋಗಲು ನಿರ್ಧಾರ

ಈ ಸುದ್ದಿಯನ್ನು ಶೇರ್ ಮಾಡಿ

Bangalore--Garbage-------01

ಬೆಂಗಳೂರು, ಜೂ.25-ಬೆಂಗಳೂರು ಮಹಾನಗರದ ಕಸದ ಸಮಸ್ಯೆ ಮುಗಿಯುತ್ತಿಲ್ಲ. ಕಳೆದ ಆರು ತಿಂಗಳಿನಿಂದ ಕಸದ ಕಂಟ್ರಾಕ್ಟರ್‍ಗಳಿಗೆ ಹಣ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಇಂದು ಗುತ್ತಿಗೆದಾರರು ಮೇಯರ್ ಅವರೊಂದಿಗೆ ನಡೆಸಿದ ಮಾತುಕತೆ ವಿಫಲವಾಗಿದ್ದು, ನಾಳೆ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರ ಅಭಿವೃದ್ಧಿ ಸಚಿವರಾದ ಡಾ.ಜಿ.ಪರಮೇಶ್ವರ್ ಅವರ ಮೊರೆ ಹೋಗಲು ನಿರ್ಧರಿಸಿದ್ದಾರೆ.

ಕಸದ ಗುತ್ತಿಗೆದಾರರೊಂದಿಗೆ ಇಂದು ಮೇಯರ್ ಸಂಪತ್‍ರಾಜ್ ಅವರು ಮಾತುಕತೆ ನಡೆಸಿ 10 ದಿನದಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಗುತ್ತಿಗೆದಾರರು ಮೇಯರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಮಸ್ಯೆ ಬಗೆಹರಿಸಿ ಇಲ್ಲವೆ, ನಮ್ಮನ್ನು ಬಿಡುಗಡೆಗೊಳಿಸಿ. ಆರು ತಿಂಗಳಿನಿಂದ ಹಣ ಬಿಡುಗಡೆ ಮಾಡದಿದ್ದರೆ ನಮ್ಮ ಗತಿ ಏನು ಎಂದು ಆಕ್ರೋಶವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ನಡೆದ ಮಾತುಕತೆ ವಿಫಲವಾಯಿತು.

ಗುತ್ತಿಗೆದಾರರು ನಾಳೆ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಪರಮೇಶ್ವರ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸುತ್ತೇವೆ ಅಲ್ಲೂ ನಮ್ಮ ಸಮಸ್ಯೆ ಬಗೆಹರಿಯದಿದ್ದರೆ ಮುಂದಿನ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದರು.

Facebook Comments

Sri Raghav

Admin