ಸ್ವಚ್ಛ ನಗರಗಳ ಪಟ್ಟಿಯಲ್ಲಿ ಪಾತಾಳಕ್ಕೆ ಕುಸಿದ ಬೆಂಗಳೂರು, ಮೇಯರ್ ಬೇಸರ

ಈ ಸುದ್ದಿಯನ್ನು ಶೇರ್ ಮಾಡಿ

Sampat-Raj

ಬೆಂಗಳೂರು, ಜೂ.25- ಸ್ವಚ್ಛ ನಗರಿ ವರದಿ ಬಿಡುಗಡೆಯಲ್ಲಿ ಬೆಂಗಳೂರು ಪಾತಾಳಕ್ಕೆ ಕುಸಿದಿರುವುದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿರುವ ಮೇಯರ್ ಸಂಪತ್‍ರಾಜ್ ಅವರು ಈ ಬಗ್ಗೆ ಕೇಂದ್ರದಿಂದ ಮಾಹಿತಿ ಪಡೆಯುವುದಾಗಿ ತಿಳಿಸಿದ್ದಾರೆ. ಉತ್ತಮ ಕೆಲಸ ಮಾಡಿದ್ದರೂ ಈ ಸ್ಥಾನ ಲಭಿಸಿರುವುದು ತೀವ್ರ ಅಸಮಾಧಾನ ತಂದಿದೆ. ಕೇಂದ್ರದಿಂದ ಮಾಹಿತಿ ತರಿಸಿಕೊಂಡು ಈ ಬಗ್ಗೆ ಆಯುಕ್ತರ ಜೊತೆ ಚರ್ಚಿಸುವುದಾಗಿ ಹೇಳಿದರು.

ಕಳೆದ ಬಾರಿ 210ನೇ ಸ್ಥಾನದಲ್ಲಿದ್ದ ಬೆಂಗಳೂರು, ಈ ಬಾರಿ 216ನೇ ಸ್ಥಾನಕ್ಕೆ ಕುಸಿದಿದೆ. ಯಾವ ಮಾನದಂಡದಲ್ಲಿ ಈ ಸ್ಥಾನಕ್ಕೆ ಹೋಗಿದೆ ಎಂಬುದು ಗೊತ್ತಿಲ್ಲ. ಈಗಾಗಲೇ 450 ಟಾಯ್ಲೆಟ್‍ಗಳನ್ನು ಕಟ್ಟಿಸಿದ್ದೇವೆ. ವೈಜ್ಞಾನಿಕವಾಗಿ ಕಸ ವಿಂಗಡಣೆ ಮಾಡಲಾಗುತ್ತಿದೆ. ಆಯುಕ್ತರ ಮೂಲಕ ನಗರಾಭಿವೃದ್ಧಿ ಇಲಾಖೆಗೆ ವರದಿ ಕೊಡಲಾಗುವುದು ಎಂದರು.

Facebook Comments

Sri Raghav

Admin