ಫುಟ್ಬಾಲ್ ನಲ್ಲಿ 2-1 ಗೋಲ್ ನಿಂದ ವಿದ್ಯಾರ್ಥಿಗಳನ್ನು ಸೋಲಿಸಿದ ಗಜಪಡೆಗೆ ..!

ಈ ಸುದ್ದಿಯನ್ನು ಶೇರ್ ಮಾಡಿ

Footboll--01

ಈಗ ಎಲ್ಲೆಡೆ ಫುಟ್ಬಾಲ್ ಜ್ವರ. ರಷ್ಯಾದಲ್ಲಿ ನಡೆಯುತ್ತಿರುವ 21ನೇ ಫಿಫಾ ವಿಶ್ವಕಪ್ ಫುಟ್ಬಾಲ್ ಜಗತ್ತಿನಾದ್ಯಂತ ಕ್ರೇಜ್ ಸೃಷ್ಟಿಸಿದೆ. ಇದೇ ಸಂದರ್ಭದಲ್ಲಿ ಥೈಲೆಂಡ್‍ನಲ್ಲಿ ವಿಶಿಷ್ಟ. ಕಾಲ್ಚೆಂಡಿನ ಕ್ರೀಡೆ ನಡೆಯಿತು. ಈ ಪಂದ್ಯದಲ್ಲಿ ಮಾನವ ತಂಡವನ್ನು ಗಜಪಡೆ ಕಾಲ್ಚಳಕದಿಂದ ಮಣಿಸಿದ್ದು ವಿಶೇಷ. ಥೈಲೆಂಡ್‍ನ ಪ್ರಾಚೀನ ರಾಜಧಾನಿ ಅಯುಟ್ಟಾಯದ ಫುಟ್ಬಾಲ್ ಮೈದಾನವೊಂದರಲ್ಲಿ 10 ಆನೆಗಳ ತಂಡ ಮತ್ತು ಸ್ಥಳೀಯ ವಿದ್ಯಾರ್ಥಿಗಳ ನಡುವೆ ಕಾಲ್ಚೆಂಡಿನ ಆಟ ನಡೆಯಿತು.

ಈಗ ರಷ್ಯಾದಲ್ಲಿ ನಡೆಯುತ್ತಿ ರುವ ವಿಶ್ವ ಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಅಕ್ರಮ ಬೆಟ್ಟಿಂಗ್ ದಂಧೆ ವಿರುದ್ಧ ಅಭಿಯಾನಕ್ಕಾಗಿ ಈ ವಿಶಿಷ್ಟ ಪಂದ್ಯ ಆಯೋಜಿಸಲಾಗಿತ್ತು. ವಿವಿಧ ದೇಶಗಳ ರಾಷ್ಟ್ರೀಯ ಧ್ವಜಗಳೊಂದಿಗೆ ಆನೆಗಳಿಗೆ ಬಣ್ಣ ಬಳಿಯಲಾಗಿತ್ತು. ಈ ಕ್ರೀಡೆಗಾಗಿಯೇ ದೊಡ್ಡ ಫುಟ್ಬಾಲ್ ಚೆಂಡನ್ನು ಬಳಸಲಾಯಿತು. ಈ ರೋಚಕ ಕ್ರೀಡೆಯಲ್ಲಿ ಗಜ ಪಡೆ ಮಾನವರ ತಂಡವನ್ನು 2-1 ಗೋಲುಗಳಿಂದ ಮಣಿಸಿತು. ಆನೆಗಳ ಕಾಲ್ಚಳಕದ ಚಮತ್ಕಾರವು ನೋಡುಗರಿಗೆ ಮನರಂಜನೆ ನೀಡಿತು. ಫಿಫಾ ವಿಶ್ವಕಪ್ ಸಂದರ್ಭದಲ್ಲೇ ಥೈಲೆಂಡ್, ಮಲೇಷ್ಯಾ ಸೇರಿದಂತೆ ಏಷ್ಯಾದ ವಿವಿಧ ದೇಶಗಳಲ್ಲಿ ಅಕ್ರಮ ಬೆಟ್ಟಿಂಗ್ ಮತ್ತು ಗ್ಯಾಬ್ಲಿಂಗ್ ದಂಧೆ ನಡೆಯುತ್ತಿದೆ. ಈ ಅಕ್ರಮ ಚಟುವಟಿಕೆಗಳಲ್ಲಿ ತೊಡಗುವ ಆಪರೇಟರ್‍ಗಳು ಪೊಲೀಸರ ಕಣ್ತಪ್ಪಿಸಲು ಅತ್ಯಾಧುನಿಕ ತಂತ್ರಜ್ಞಾನ ಮತ್ತು ಕ್ರಿಪ್ಟಾ ಕರೆನ್ಸಿಗಳನ್ನು ಬಳಸುತ್ತಿದ್ದಾರೆ. ಈ ಅಕ್ರಮ ದಂಧೆಗೆ ಕಡಿವಾಣ ಹಾಕಬೇಕೆಂಬ ಸಂದೇಶದೊಂದಿಗೆ ಗಜಗಳ ಫುಟ್ಬಾಲ್ ಪಂದ್ಯ ಆಯೋಜಿಸಲಾಗಿತ್ತು.

 

Facebook Comments

Sri Raghav

Admin