ಸಿದ್ದರಾಮಯ್ಯರ ಭೇಟಿಗೆ ತೆರಳಿದ್ದ ಸಚಿವರ ಹೆಲಿಕಾಪ್ಟರ್ ಲ್ಯಾಂಡ್ ಆಗದೆ ವಾಪಸ್

ಈ ಸುದ್ದಿಯನ್ನು ಶೇರ್ ಮಾಡಿ

Helicaptor
ಮಂಗಳೂರು, ಜೂ.25- ಹವಾಮಾನ ವೈಪರೀತ್ಯ ಹಿನ್ನೆಲೆಯಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಜಮೀರ್ ಅಹಮ್ಮದ್ ಖಾನ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಲ್ಯಾಂಡ್ ಆಗದೆ ಧರ್ಮಸ್ಥಳದಿಂದ ಹಿಂದಿರುಗಿದ್ದಾರೆ. ಧರ್ಮಸ್ಥಳದ ಉಜಿರೆಯ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲೆಂದು ಹೆಲಿಕಾಪ್ಟರ್‍ನಲ್ಲಿ ಬರುತ್ತಿದ್ದ ಜಮೀರ್ ಅಹಮ್ಮದ್ ಅವರು ಲ್ಯಾಂಡ್ ಆಗಲು ಸಿಗ್ನಲ್ ಸಿಗದ ಹಿನ್ನೆಲೆಯಲ್ಲಿ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ.

ಇಂದು ಬೆಳಗ್ಗೆಯೇ ಜಕ್ಕೂರು ಏರೋ ಡ್ರಮ್‍ನಿಂದ ಸಚಿವರ ಹೆಲಿಕಾಪ್ಟರ್ ಉಜಿರೇಯತ್ತ ತೆರಳಿತ್ತು ಆದರೆ ಮಾರ್ಗ ಮಧ್ಯೆ ಹವಾಮಾನ ವೈಪರೀತ್ಯದ ಕಾರಣ ಸಿಗ್ನಲ್ ಸಿಗದಿದ್ದ ಕಾರಣ ಧರ್ಮಸ್ಥಳದಲ್ಲಿ ಲ್ಯಾಂಡ್ ಆಗಲು ಪ್ರಯತ್ನಿಸಲಾಯಿತು. ಆದರೆ ಮುಂಜಾಗ್ರತೆ ಕ್ರಮವಾಗಿ ಹೆಲಿಕಾಪ್ಟರ್ ಅನ್ನು ಪೈಲೆಟ್ ಬೆಂಗಳೂರಿನತ್ತ ತಿರುಗಿಸಿದ್ದಾರೆ ಎಂದು ಹೇಳಲಾಗಿದೆ.

Facebook Comments

Sri Raghav

Admin