ಸೈಕಲ್ ಸವಾರಿಯಲ್ಲಿ 127 ವರ್ಷಗಳ ದಾಖಲೆ ಮುರಿದ ‘ಏಕಚಕ್ರಾ’ಧಿಪತಿ ಈತ..!

ಈ ಸುದ್ದಿಯನ್ನು ಶೇರ್ ಮಾಡಿ

ds

ಬ್ರಿಟಿಷ್ ಸೈಕಲ್ ಸವಾರ ಮಾರ್ಕ್ ಬ್ಯೂಮೊಂಟ್ ದೊಡ್ಡ ಚಕ್ರದ ಸೈಕಲ್ ಮೇಲೆ ದೀರ್ಘ ಅಂತರ ಸವಾರಿ ಮಾಡಿ 127 ವರ್ಷಗಳ ಹಿಂದಿನ ದಾಖಲೆಯನ್ನು ಮುರಿದಿದ್ದಾರೆ. ಪೆನ್ನಿ ಫಾರ್ಥಿಂಗ್ ಇದು ಮುಂದೆ ದೊಡ್ಡ ಚಕ್ರ ಮತ್ತು ಹಿಂದೆ ಸಣ್ಣ ಚಕ್ರವಿರುವ ಸೈಕಲ್. ಯುನೈಟೆಡ್ ಕಿಂಗ್‍ಡಂನ ದಕ್ಷಿಣ ಲಂಡನ್‍ನ ಹರ್ನೆ ಹಿಲ್ ವೆಲೊಡ್ರೋಮ್‍ನಲ್ಲಿ ಬ್ರಿಟಿಷ್ ಸೈಕಲ್ ಸವಾರ ಮಾರ್ಕ್ ಬ್ಯೂಮೊಂಟ್ ಈ ಸೈಕಲ್ ಮೇಲೆ ದೀರ್ಘ ಅಂತರ ಸವಾರಿ ಮಾಡಿ 127 ವರ್ಷಗಳ ಹಿಂದಿನ ದಾಖಲೆ ಮುರಿಯುವಲ್ಲಿ ಯಶಸ್ವಿಯಾದರು. ಆದರೆ ವಿಶ್ವ ದಾಖಲೆ ಮುರಿಯಬೇಕೆಂಬ ಇವರ ಗುರಿ ಈಡೇರಲಿಲ್ಲ.

ds-1

ಅಮೆರಿಕದ ಮಸ್ಸಾಚುಸೆಟ್ಸ್‍ನಲ್ಲಿ 1866ರಲ್ಲಿ ಡಬ್ಲ್ಯುಎ ರೋವ್ ಅವರು ಇಂಥ ಸೈಕಲ್ ಮೇಲೆ 35.54 ಕಿಲೋ ಮೀಟರ್ ಕ್ರಮಿಸಿ ವಿಶ್ವದಾಖಲೆ ಸೃಷ್ಟಿಸಿದ್ದರು. 132 ವರ್ಷಗಳ ಹಿಂದಿನ ವಿಶ್ವ ದಾಖಲೆ ಸೃಷ್ಟಿಸಲು ಬ್ಯೂಮೊಂಟ್‍ಗೆ ಸಾಧ್ಯವಾಗದಿದ್ದರೂ, 127 ವರ್ಷಗಳ ಹಿಂದೆ 1891ರಲ್ಲಿ ಬಿ.ಡಬ್ಲ್ಯು. ಅಟ್ಲೀ ಅವರಿ ನಿರ್ಮಿಸಿದ್ದ 33.69 ಕಿಲೋ ಮೀಟರ್ ಸೈಕಲ್ ಸವಾರಿ ದಾಖಲೆಯನ್ನು ಮುರಿಯುವಲ್ಲಿ ಸಫಲರಾಲದರು. ಇವು 35.27 ಕಿಲೋ ಮೀಟರ್ ಕ್ರಮಿಸಿ ಆ ದಾಖಲೆಯನ್ನು ಹಿಂದಿಕ್ಕಿದರು.  ಈ ರೇಸ್‍ನಲ್ಲಿ ಬ್ಯೂ ಮೊಂಟ್‍ಗೆ ಇತರ ಎಂಟು ಸೈಕಲ್ ಸವಾರರು ಬೆಂಬಲ ವಾಗಿ ಸಾಥ್ ನೀಡಿದರು.  ಕಳೆದ ವರ್ಷ ಬ್ಯೂಮೊಂಟ್ 78 ದಿನಗಳು ಮತ್ತು 14 ಗಂಟೆಗಳು ಹಾಗೂ 40 ನಿಮಿಷಗಳಲ್ಲಿ 29,000 ಕಿಲೋಮೀಟರ್ ಸೈಕಲ್ ಸವಾರಿ ಮಾಡಿ ದಾಖಲೆ ನಿರ್ಮಿಸಿದ್ದರು.

Facebook Comments

Sri Raghav

Admin