ಪಾಕ್ ವಿರುದ್ಧ ಅಖಾಡಕ್ಕಿಳಿಯಲಿರುವ ಪ್ರದೀಪ್ ನರ್ವಾಲ್

ಈ ಸುದ್ದಿಯನ್ನು ಶೇರ್ ಮಾಡಿ

Pradeep--012

ದುಬೈ, ಜೂ. 25- ಭಾರತ ತಂಡದ ಶ್ರೇಷ್ಠ ಆಟಗಾರ ಪ್ರದೀಪ್ ನರ್ವಾಲ್ ಇಂದು ನಡೆಯಲಿರುವ ದುಬೈ ಮಾಸ್ಟರ್ಸ್ ಕಬ್ಬಡಿ ಸರಣಿಯಲ್ಲಿ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಅಖಾಡಕ್ಕಿಳಿಯಲಿದ್ದಾರೆ. ಕಳೆದ ಶುಕ್ರವಾರ ಪಾಕಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ ತಂಡ ಅಮೋಘ ಗೆಲುವು ಸಾಧಿಸಿತ್ತು. ಆದರೆ ಆ ಪಂದ್ಯದಲ್ಲಿ ಪ್ರದೀಪ್ ನರ್ವಾಲ್ ಅಖಾಡಕ್ಕಿಳಿದಿರಲಿಲ್ಲ. ನಂತರ ಕೀನ್ಯಾ ವಿರುದ್ಧ ನಡೆದ ಪಂದ್ಯದ ವೇಳೆಯೂ ತಂಡದಿಂದ ಹೊರಗುಳಿದಿದ್ದರು.

ಎರಡು ಪಂದ್ಯ ಗಳಿಂದಲೂ ತಂಡದಿಂದ ಹೊರಗುಳಿದಿದ್ದರೂ ಕೂಡ ಇಂದು ಪಾಕ್ ವಿರುದ್ಧ ನಡೆಯುವ ಪಂದ್ಯದಲ್ಲಿ ಉದಯೋನ್ಮುಖ ಆಟಗಾರ ಅಖಾಡಕ್ಕಿಳಿ ಯುವುದು ಖಚಿತ ಎಂದು ಭಾರತ ತಂಡದ ನಾಯಕ ಅಜಯ್ ಠಾಕೂರ್ ತಿಳಿಸಿದ್ದಾರೆ. ಕಳೆದ ಎರಡು ಪಂದ್ಯಗಳಿಂದಲೂ ತಂಡದಿಂದ ಹೊರಗುಳಿದಿದ್ದೆ, ಪಾಕ್ ವಿರುದ್ಧದ ಪಂದ್ಯದಲ್ಲಿ ಅಖಾಡಕ್ಕಿಳಿಯುತ್ತಿರುವುದು ಸಂತಸ ತಂದಿದೆ. ತಂಡಕ್ಕೆ ಉತ್ತಮ ಕೊಡುಗೆ ನೀಡುತ್ತೇನೆ ಎಂದು ಪ್ರದೀಪ್ ನರ್ವಾಲ್ ತಿಳಿಸಿದ್ದಾರೆ.

ಪ್ರೊ ಕಬ್ಬಡಿ ಲೀಗ್‍ನಲ್ಲಿ ಪಾಟ್ನಾ ಪೆರೇಟ್ಸ್ ತಂಡವನ್ನು ಮುನ್ನಡೆಸುತ್ತಿರುವ ಪ್ರದೀಪ್ ನರ್ವಾಲ್ ತಮ್ಮ ಉತ್ತಮ ಪ್ರದರ್ಶನದಿಂದ ತಂಡ 3 ಬಾರಿ ಚಾಂಪಿಯನ್ಸ್ ಆಗಿ ಹೊರಹೊಮ್ಮಿದ್ದರೆ, ಪ್ರದೀಪ್ ಆಡಿದ 24 ಪಂದ್ಯಗಳಿಂದ 369 ರೇಡ್ ಪಾಯಿಂಟ್ಸ್‍ಗಳನ್ನು ಪಡೆದು ಕೊಂಡಿರುವುದು ಪಿಕೆಎಲ್‍ನ ದಾಖಲೆಯಾಗಿದೆ.

Facebook Comments

Sri Raghav

Admin