ಅಲೆಮಾರಿಗಳು ಮತ್ತು ರೈತರ ನಡುವೆ ನಡೆದ ಭೀಕರ ಘರ್ಷಣೆಯಲ್ಲಿ 86 ಮಂದಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Nigeria--01

ಜೋಸ್(ನೈಜೀರಿಯಾ), ಜೂ.25-ಬುಡಕಟ್ಟು ಅಲೆಮಾರಿಗಳು ಮತ್ತು ರೈತರ ನಡುವೆ ನಡೆದ ಭೀಕರ ಘರ್ಷಣೆಯಲ್ಲಿ 86 ಮಂದಿ ಮೃತಪಟ್ಟು. ಅನೇಕರು ಗಾಯಗೊಂಡಿರುವ ಘಟನೆ ನೈಜೀರಿಯಾ ಬರಿಕಿನ್ ಲಡಿ ಪ್ರದೇಶದಲ್ಲಿ ನಡೆದಿದೆ. ಈ ಘರ್ಷಣೆಯಿಂದ ಅಲೆಮಾರಿಗಳು ಮತ್ತು ಕೃಷಿಕ ಸಮುದಾಯದ ನಡುವೆ ದ್ವೇಷಾಗ್ನಿ ಮತ್ತಷ್ಟು ಉಲ್ಬಣಗೊಂಡಿದ್ದು, ಯಾವುದೇ ಸಂದರ್ಭದಲ್ಲಿ ಮತ್ತೆ ಹಿಂಸಾಚಾರ ಭುಗಿಲೆಳುವ ಸಾಧ್ಯತೆ ಇದೆ.

Nigeria  05

ಹಿಂಸಾಚಾರ ಮತ್ತು ಕಗ್ಗೊಲೆಗಳ ಬಗ್ಗೆ ದಿಗ್ಭ್ರಮೆ ವ್ಯಕ್ತಪಡಿಸಿರುವ ನೈಜೀರಿಯಾ ಅಧ್ಯಕ್ಷ ಮುಹಮಹದು ಬುಹಾರಿ ಎರಡು ಸಮುದಾಯಗಳು ಶಾಂತವಾಗಿರುವಂತೆ ಮನವಿ ಮಾಡಿ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಬಂದೋಬಸ್ತ್‍ಗೆ ಆದೇಶ ನೀಡಿದ್ದಾರೆ.  ಜನಾಂಗೀಯ ಬೊರೊಮ್ ಕೃಷಿಕರು ಮತ್ತು ಫಲುನಾ ಅಲೆಮಾರಿಗಳ ನಡುವೆ ಆಗಾಗ ಘರ್ಷಣೆ ಮತ್ತು ಹಿಂಸಾಚಾರದಿಂದ ಸಾವು-ನೋವು ಪ್ರಕರಣಗಳು ಮರುಕಳಿಸುತ್ತಿವೆ.

 

Nigeria  02

Nigeria  01

Facebook Comments

Sri Raghav

Admin