ಹೆಣ್ಣು ಮಗು ಹುಟ್ಟಿತೆಂದು ಜೀವಂತ ಸಮಾಧಿಗೆ ಯತ್ನ

ಈ ಸುದ್ದಿಯನ್ನು ಶೇರ್ ಮಾಡಿ

baby-child

ಬೆಳಗಾವಿ, ಜೂ.26- ಹೆಣ್ಣು ಮಗು ಹುಟ್ಟಿತೆಂದು ಪೋಷಕರು ಈ ಶಿಶುವನ್ನು ಜೀವಂತ ಮಣ್ಣು ಮಾಡಲು ಯತ್ನಿಸಿದ ಅಮಾನವೀಯ ಘಟನೆ ಕುಂದಾನಗರಿಯಲ್ಲಿ ನಡೆದಿದೆ. ಶಹಪುರದಲ್ಲಿರುವ ಸ್ಮಶಾನವೊಂದರಲ್ಲಿ ಸ್ಮಶಾನದಲ್ಲಿ ಯಾರೂ ಇಲ್ಲದ್ದನ್ನು ನೋಡಿ ಮಗುವನ್ನು ಮಣ್ಣು ಮಾಡಿ ಅಂತ್ಯಕ್ರಿಯೆಗೆ ಪ್ರಯತ್ನಿಸಿದ್ದಾರೆ.  ಮಗು ಅಳುವ ಶಬ್ದ ಕೇಳಿ ಸ್ಥಳೀಯರು ಬಂದು ಪೋಷಕರನ್ನು ಪ್ರಶ್ನಿಸಿದ್ದು, ಇದಕ್ಕೆ ಉತ್ತರಿಸಲಾಗದೆ ಕಾರಿನಲ್ಲಿ ಪರಾರಿಯಾಗಿದ್ದಾರೆ. ಸ್ಥಳೀಯರು ಮಣ್ಣು ತೆಗೆದು ಮಗುವನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.  ಈ ಸಂಬಂಧ ಶಹಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Facebook Comments

Sri Raghav

Admin